ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಮರಾಠಿ ಕವನ ವಾಚಿಸಿದ ಸಾಹಿತಿ ಭೀಮರಾವ್ ವಾಷ್ಠರ್

0

ಪ್ರಸಿದ್ಧ ಮಡಿಕೇರಿ ದಸರಾ ಪ್ರಯುಕ್ತ ಜರುಗಿದ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಸುಳ್ಯದ ಖ್ಯಾತ ಸಾಹಿತಿ ಮತ್ತು ಜ್ಯೋತಿಷ್ಯರಾದ ಎಚ್ ಭೀಮರಾವ್ ವಾಷ್ಠರ್ ಅವರು ಮರಾಠಿ ಭಾಷೆಯ ಕವನವನ್ನು ವಾಚಿಸಿದರು.

ಸುಮಾರು 20 ವರ್ಷಗಳಿಂದ ಸುಳ್ಯದಲ್ಲಿಯೇ ನೆಲೆಸಿರುವ ಸಾಹಿತಿ ಭೀಮರಾವ್ ವಾಷ್ಠರ್ ರವರು ಸತತವಾಗಿ 15 ವರ್ಷಗಳಿಂದ ಮಡಿಕೇರಿ ದಸರಾ ಕವಿಗೋಷ್ಟಿಯಲ್ಲಿ ಮರಾತೀ ಭಾಷೆಯ ಕವನ ವಾಚನ ಮಾಡುತ್ತಾ ಬಂದಿದ್ದಾರೆ.

ಸಾಹಿತಿ, ಖ್ಯಾತ ವಂಶಪಾರಂಪರ್ಯ ಜ್ಯೋತಿಷಿ, ಸಂಘಟಕ, ಚಿತ್ರ ನಿರ್ಮಾಪಕ, ನಿರ್ದೇಶಕ, ಗಾಯಕ, ಚಿತ್ರನಟ, ಕಥೆಗಾರ, ಉದಾಯೊನ್ಮುಖ ಕವಿ ಹಾಗೂ ಗಾಯಕರಿಗೆ ಪ್ರೋತ್ಸಾಹಕರಾಗಿರುವ ಇವರು ಹಲವಾರು ಮ್ಯೂಸಿಕ್ ಆಲ್ಬಮ್ ಗಳನ್ನು ತಯಾರಿಸಿದ್ದಲ್ಲದೇ ಎರಡು ಚಲನಚಿತ್ರಗಳನ್ನು ನಿರ್ದೇಶಸಿ ನಟಿಸಿದ್ದಾರೆ. ಇವರ ಸಾಧನೆಗಳಿಗೆ ಮೂರು ರಾಷ್ಟ್ರಪ್ರಶಸ್ತಿಗಳು 25 ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳು, 100 ಕ್ಕೂ ಅಧಿಕ ಬಾರಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ.