ಆಲೆಟ್ಟಿ: ಮದರಂಗಿ ಶಾಸ್ತ್ರದ ಮನೆಯಲ್ಲಿ ಭಜನಾ ಕಾರ್ಯಕ್ರಮ

0

ಆಲೆಟ್ಟಿ ನಿವಾಸಿ ಅಚ್ಚುತ ಮಣಿಯಾಣಿ ಯವರ ಪುತ್ರ ಪ್ರವೀಣ್ ಆಲೆಟ್ಟಿ ಯವರ ವಿವಾಹ ಮುನ್ನ ದಿನ ಅ.31 ರಂದು ಮನೆಯಲ್ಲಿ ನಡೆಯುವ ಮದರಂಗಿ ಶಾಸ್ತ್ರದಲ್ಲಿ ‌ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸ್ಥಳೀಯ ಶ್ರೀ ಸದಾಶಿವ ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ನೇತೃತ್ವದಲ್ಲಿ ಸಂಘದ ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇತ್ತೀಚಿನ ದಿನಗಳಲ್ಲಿ ಇಂತಹಕಾರ್ಯಕ್ರಮಗಳಲ್ಲಿ ಡಿ.ಜೆ ಸೌಂಡ್ಸ್ ಅಳವಡಿಸಿ ಮನರಂಜನೆ ಪಡೆಯುವುದನ್ನು ‌ನಾವು ಕಾಣುತ್ತಿದ್ದೇವೆ. ಭಜನೆಯಿಂದ ಬದಲಾವಣೆ ಎಂಬ ನಾಣ್ಣುಡಿಗೆ ಪೂರಕವೆಂಬಂತೆ ಇಂತಹ ಮಾದರಿ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು.
ಪ್ರವೀಣ್ ರವರು ಸದಾಶಿವ ಭಜನಾ ಸಂಘದ ಕಾರ್ಯದರ್ಶಿಯಾಗಿದ್ದು ಆಲೆಟ್ಟಿ ಸಹಕಾರಿ ಸಂಘದಲ್ಲಿ ಉದ್ಯೋಗಿಯಾಗಿದ್ದಾರೆ.