ಹಳೆಗೇಟು: ಬೃಹತ್ ಹೆಬ್ಬಾವನ್ನು ಹಿಡಿದ ಸ್ಥಳೀಯರು, ಕಾಡಿಗೆ ರವಾನೆ

0

ಹಳೇಗೇಟು ಸಮೀಪ ಜಯನಗರ ರಸ್ತೆಯ ಮನೆಯೊಂದರ ಕಾಂಪೌಂಡ್ ಬಳಿ ಬೃಹದಾಕಾರದ ಹೆಬ್ಬಾವು ನಿನ್ನೆ ತಡೆ ರಾತ್ರಿ ಕಂಡುಬಂದಿದ್ದು ಸ್ಥಳೀಯ ಯುವಕರು ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಬಳಿಕ ಅದನ್ನು ದೂರದ ಕಾಡಿಗೆ ಬಿಟ್ಟು ಬಂದಿರುವುದಾಗಿ ತಿಳಿದುಬಂದಿದೆ.

ಹೆಬ್ಬಾವನ್ನು ನೋಡಿದ ಮನೆಯವರು ಆತಂಕಗೊಂಡು ಸ್ಥಳೀಯ ಯುವಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹಾರಿಸ್ ಆಚು, ಸಲೀಂ ಕುತ್ತಮಟ್ಟೆ, ಜಲೀಲ್ ಜಯನಗರ, ಮುನೀರ್ ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.