ಸುಳ್ಯ‌ ನಗರ ಪಂಚಾಯತ್ ಉದ್ಯೋಗಿ ಶ್ರೀಜೇಶ್ ಸೇವಾ ನಿವೃತ್ತಿ : ಬೀಳ್ಕೊಡುಗೆ

0

ಸುಳ್ಯ ‌ನಗರ ಪಂಚಾಯತ್ ನಲ್ಲಿ ಹಿರಿಯ ವಾಲ್ ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಜೇಶ್ ಜಯನಗರ ಅ.31 ರಂದು ಸೇವಾ ನಿವೃತ್ತರಾಗಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

1995 ರಲ್ಲಿ ನಗರ ಪಂಚಾಯತ್ ನ ನೀರು ಸರಬರಾಜು ಕೇಂದ್ರದಲ್ಲಿ ದಿನಗೂಲಿ ನೌಕರರಾಗಿ ಸೇವೆಗೆ ಸೇರಿದ ಅವರು 2005 ರಲ್ಲಿ ಖಾಯಂ ನೌಕರರಾದರು. ಬಳಿಕ 2007 ರಲ್ಲಿ ಸುಳ್ಯದಿಂದ ಉಳ್ಳಾಲಕ್ಕೆ ವರ್ಗಾವಣೆಗೊಂಡರು. 2014 ರಲ್ಲಿ ಅವರು ಮತ್ತೆ ಸುಳ್ಯಕ್ಕೆ ಬಂದರು.

ಅವರಿಗೆ ‌ಬೀಳ್ಕೊಡುಗೆ ಸಮಾರಂಭ ಸುಳ್ಯ‌ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಸದಸ್ಯರು, ಮುಖ್ಯಾಧಿಕಾರಿ, ಸಿಬ್ಬಂದಿಗಳು ಸೇರಿ ಶ್ರೀಜೇಶ್ ರನ್ನು ಸನ್ಮಾನಿಸಿದರು.