ಗಾಳಿ ಮಳೆಗೆ‌ ಕಳಂಜ ವಿಶ್ವನಾಥ ರೈಯವರ ತೋಟಕ್ಕೆ ಹಾನಿ

0

ಅ. 30ರಂದು ಬೀಸಿದ ಗಾಳಿಗೆ ಕಳಂಜ ಭಾಗದ ಹಲವು ತೋಟಗಳಲ್ಲಿ ಅಡಿಕೆ ಮರ ಮರಿದು ಬಿದ್ದ ಘಟನೆ ವರದಿಯಾಗಿದೆ.


ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ಎನ್.‌ ವಿಶ್ವನಾಥ ರೈಯವರ ತೋಟದಲ್ಲಿ ಸುಮಾರು 150 ರಷ್ಟು ಅಡಕೆ‌ ಮರಗಳು ಮರಿದು ಬಿದ್ದಿರುವುದಲ್ಲದೆ, ಸಿಡಿಲು ಬಡಿದು ಕೆಲವು ಮರಗಳಿಗೆ ಹಾನಿಯಾಗಿರುವುದಾಗಿ ಸುದ್ದಿಗೆ ತಿಳಿಸಿದ್ದಾರೆ. ತಂಟೆಪ್ಪಾಡಿಯ ಶೇಷಪ್ಪ ನಾಯ್ಕ, ಮಹಾಬಲ ಗೌಡ ಸೇರಿದಂತೆ ಆ ಭಾಗದ ಅನೇಕ ತೋಟಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ