ಪೆರುವಾಜೆ ಶಾಲಾ ಭೋಜನಾ ಶಾಲಾ ನಿರ್ಮಾಣಕ್ಕೆ ಶ್ರೀ. ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುದಾನ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾಜೆಯ ಭೋಜನಾ ಶಾಲೆಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸುಳ್ಯ ತಾಲೂಕು ವತಿಯಿಂದ 75,000 ರೂ. ಗಳ ಮಂಜೂರಾತಿ ಆದೇಶವನ್ನು
ಯೋಜನಾಧಿಕಾರಿಗಳಾದ ನಾಗೇಶ್ ಇವರು ಶಾಲೆಯ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್. ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿಜಯ ಆಚಾರ್ಯ ರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಬೆಳ್ಳಾರೆ ವಲಯದ ಮೇಲ್ವಿಚಾರಕರಾದ ಗೋಪಾಲಕೃಷ್ಣ, ಪೆರುವಾಜೆ,
ಪೆರುವಾಜೆ ಒಕ್ಕೂಟದ ಅಧ್ಯಕ್ಷರಾದ ಸುಂದರ ನಾಯ್ಕ,
ಪೆರುವಾಜೆ ಒಕ್ಕೂಟದ ಸೇವಾ ಪ್ರತಿನಿಧಿಗಳಾದ ಶ್ರೀಮತಿ ಹರಿಣಾಕ್ಷಿ ,
ಪೆರುವಾಜೆ ವಾರ್ಡ್ ಸದಸ್ಯರಾದ ಪದ್ಮನಾಭ ಶೆಟ್ಟಿ , ಶಿಕ್ಷಕರಾದ ಶ್ರೀಮತಿ ರತ್ನಾವತಿ, ಶ್ರೀಮತಿ ಶೃತಿ, ಶ್ರೀಮತಿ ಲೀನಾ, ಶ್ರೀಮತಿ ಅಶ್ವಿತಾ, ಶಾಲಾ ಎಸ್. ಡಿ.ಎಂ.ಸಿ. ಉಪಾಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಉಮೇಶ್ ,
ಪೋಷಕರಾದ ಲಿಂಗಪ್ಪ ಆಚಾರ್ಯ, ಕೇಶವ, ಶ್ರೀಮತಿ ರಾಗಿಣಿ , ಶ್ರೀಮತಿ ವೀಣಾ ಉಪಸ್ಥಿತರಿದ್ದರು.