ಅಡ್ಪಂಗಾಯ : ಗಾಳಿ ಮಳೆಗೆ ಮನೆಯ ಎದುರಿನ ತೆಂಗಿನ ಮರ ಬಿದ್ದು ಮನೆಗೆ ಹಾನಿ

0

ಗಾಳಿ‌ ಮಳೆಗೆ ಮನೆಯ ಎದುರಿನ ದೊಡ್ಡ ಗಾತ್ರದ ತೆಂಗಿನ ಮರ ಮಗುಚಿ ಮನೆಗೆ ಬಿದ್ದ ಪರಿಣಾಮ ಹಾನಿ ಸಂಭವಿಸಿದ ಘಟನೆ ನ.1 ರಂದು ವರದಿಯಾಗಿದೆ.

ಅಜ್ಜಾವರ ಗ್ರಾಮದ ಹೈಸ್ಕೂಲ್ ಬಳಿ ಸೂರ್ಯಕುಮಾರ್ ಎಂಬವರ ಮನೆಯ ಎದುರಿನ ಮರ ಮಗುಚಿ ಮನೆಯ ಒಂದು ಭಾಗಕ್ಕೆ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.