ಮಲೆನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಡಿ.ವಿ ಸದಾನಂದ ಗೌಡರಿಗೆ ಮನವಿ

0

ಮಲೆನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಡಿ.ವಿ ಸದಾನಂದ ಗೌಡರಿಗೆ ನ.2 ರಂದು ಮನವಿ ಸಲ್ಲಿಸಲಾಗಿದ್ದು ಕಸ್ತೂರಿರಂಗನ್ ವರದಿ ಅನುಷ್ಠಾನ ಹಾಗೂ ಅಪಾಯಕಾರಿ ಯೋಜನೆ ಕೈಬಿಡಬೇಕು ಎಂದು ಕೇಳಿಕೊಳ್ಳಲಾಗಿದೆ.

ಸದಾನಂದ ಗೌಡರು ಸುಬ್ರಹ್ಮಣ್ಯ ದೇವಸ್ಥಾನ ಕ್ಕೆ ಆಗಮಿಸಿದ್ದ ಸಂದರ್ಭ ಮನವಿ ಸಲ್ಲಿಸಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಸ್ಯರು ಜಂಟಿ ಸರ್ವೆ ಮಾಡಿ ಪರಿಹರಿಸಬೇಕು. ಕಸ್ತೂರಿ ರಂಗನ್ ವರದಿ ಅನುಷ್ಠಾನವಾಗದಂತೆ ಕ್ರಮ ವಹಿಸಬೇಕು, ಪರಿಸರ ಸಂರಕ್ಷಣೆ ಹೆಸರಲ್ಲಿ ಬರುವ ಅಪಾಯಕಾರಿ ಯೋಜನೆಗಳಿಗೆ ಕಡಿವಾಣ ಹಾಕಬೇಕು, ಪಶ್ಚಿಮ ಘಟ್ಟ ಶ್ರೇಣಿ ಪ್ರದೇಶ ಮತ್ತು ಜನವಸತಿ ಇರುವ ಪ್ರದೇಶದ ಗ್ರಾಮಗಳಿಗೆ ಗಡಿ ಗುರುತು ಆಗದೇ ಇರುವುದರಿಂದ ಕೆಲವೊಂದು ಗ್ರಾಮಗಳಲ್ಲಿ ಕೃಷಿ ಭೂಮಿಯನ್ನು ಪಹಣಿಯಲ್ಲಿ ಸರಕಾರಿ ಮತ್ತು ಅರಣ್ಯ ಎಂದು ನಮೂದಿಸಿರುವುದರಿಂದ ರೈತರಿಗೆ ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ವಾಸಿಸುತ್ತಿದ್ದರೂ ಹಕ್ಕು ಪತ್ರ, ನಿವೇಶನ ಪತ್ರ ಸಿಗುವುದಿಲ್ಲ ಈ ಸಮಸ್ಯೆಗಳನ್ನು ಜಂಟಿ ಸರ್ವೆ ಮಾಡಿ ಪರಿಹರಿಸಬೇಕು


ಆನೆ ದಾಳಿಯಿಂದ ರೈತರ ಸಾವು ನೋವುಗಳಿಗೆ ಸ್ಪಂದನೆ ನೀಡಬೇಕು, ಎಂದು ಕೇಳಿಕೊಳ್ಳಲಾಗಿದೆ. ಈ ಸಂದರ್ಭ. ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಸದಸ್ಯರುಗಳಾದ ಜಯಪ್ರಕಾಶ್ ಕೂಜುಗೋಡು, ಚಂದ್ರಹಾಸ ಶಿವಾಲ ಉಪಸ್ಥಿತರಿದ್ದರು.