ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಮತ್ತು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ವತಿಯಿಂದ ನ.12 ರಂದು ಆಲೆಟ್ಟಿ ಸೊಸೈಟಿಯ ಸಭಾಭವನದಲ್ಲಿ ಮುಕ್ತ ಡಬಲ್ಸ್ ಮತ್ತು ಸಿಂಗಲ್ಸ್ ಕೇರಂ ಪಂದ್ಯಾಟವು ನಡೆಯಲಿರುವುದು.









ಪಂದ್ಯಾಟದ ಉದ್ಘಾಟನೆಯನ್ನು ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾಕುಮಾರಿ ನೆರವೇರಿಸಲಿರುವರು. ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತೀರ್ಥಕುಮಾರ್ ವಾಲ್ತಾಜೆ ಅಧ್ಯಕ್ಷತೆ ವಹಿಸಲಿರುವರು.
ಪಂದ್ಯಾಟದ ವಿಜೇತರಿಗೆ ಡಬಲ್ಸ್ ಪ್ರಥಮ ರೂ.5555/- ಮತ್ತು ಶಾಶ್ವತ ಫಲಕ, ದ್ವಿತೀಯ ರೂ.3333/- ಮತ್ತು ಶಾಶ್ವತ ಫಲಕ, ಸಿಂಗಲ್ಸ್ ಪ್ರಥಮ ರೂ.2222/- ಮತ್ತು ಶಾಶ್ವತ ಫಲಕ, ದ್ವಿತೀಯ ರೂ.1111/- ಮತ್ತು ಶಾಶ್ವತ ಫಲಕ ನೀಡಲಾಗುವುದು. ಭಾಗವಹಿಸುವ ತಂಡಗಳು ಪ್ರವೇಶ ಶುಲ್ಕ ಪಾವತಿಸಿ ಪಾಲ್ಗೊಳ್ಳುವಂತೆ ಸಂಘಟಕರು ತಿಳಿಸಿದರು.









