ನಾಸಾ ವತಿಯಿಂದ ಆಯೋಜಿಸಲಾದ ಕಾನ್ಪರೆನ್ಸ್‌ನಲ್ಲಿ ಡಾ.ಆರ್.ಕೆ.ನಾಯರ್

0

ನಾಸಾದ ವತಿಯಿಂದ ಡಿ.5 ರಂದು ಆಯೋಜಿಸಲಾಗುವ ಕಾನ್ಸರೆನ್ಸ್‌ನಲ್ಲಿ ಭಾಗವಹಿಸಲು ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ.ಆರ್.ಕೆ.ನಾಯ ಆಯ್ಕೆಯಾಗಿದ್ದಾರೆ.

ನಾಸಾ ಏರ್ಪಡಿಸಿದ ಕಾನ್ಪರೆನ್ಸ್‌ನಲ್ಲಿ ವಿಶ್ವದ ವಿವಿಧ ಭಾಗಗಳ ವಿಜ್ಞಾನಿಗಳು ಹಾಗೂ ತಜ್ಞರು ಭಾಗವಹಿಸುತ್ತಿದ್ದಾರೆ. ಜಾಗತಿಕ ತಾಪಮಾನದ ಬಗ್ಗೆ ನಡೆಯುವ ಕಾನ್ಪರೆನ್ಸ್‌ನಲ್ಲಿ ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಮಿಯಾವಾಕಿ ಅರಣ್ಯದ ಪಾತ್ರದ ಬಗ್ಗೆ ಚರ್ಚೆ ನಡೆಯಲಿದೆ. ಮಿಯಾವಾಕಿ ಮಾದರಿಯ ಅರಣ್ಯ ಬೆಳೆಸುವುದರಿಂದ ಭೂಮಿಗೆ, ಜೀವರಾಶಿಗಳಿಗೆ ಮತ್ತು ಮುಂದಿನ ಜನಾಂಗಕ್ಕೆ ಆಗುವ ಪ್ರಯೋಜನಗಳ ಕುರಿತು ಡಾ.ಆರ್.ಕೆ.ನಾಯರ್ ಮಾತನಾಡಲಿದ್ದಾರೆ. ಮಿಯಾವಾಕಿ ಮಾದರಿಯಲ್ಲಿ ಅರಣ್ಯೀಕರಣ ನಡೆಸುವ ತಮ್ಮ ಅನುಭವಗಳ ಬಗ್ಗೆಯೂ ಅವರು ಮಾತನಾಡಲಿದ್ದಾರೆ. ಮಿಯಾವಾಕಿ ಅರಣ್ಯದ ಬಗ್ಗೆ ನಾಸಾ ನಡೆಸುವ ಸರ್ವೆಯ ಭಾಗವಾಗಿ ಕಾನ್ಸರೆನ್ಸ್ ಏರ್ಪಡಿಸಲಾಗಿದೆ.

ಮೂಲತಃ ಸುಳ್ಯದ ಜಾಲ್ಸೂರಿನವರಾದ ಡಾ. ಆರ್.ಕೆ.ನಾಯರ್‌ರವರು ಗುಜರಾತ್‌ನಲ್ಲಿ ಉದ್ಯಮಿಯಾಗಿದ್ದು, ಮಿಯಾವಾಕಿ ಮಾದರಿಯಲ್ಲಿ ೧೧೨ ಅರಣ್ಯ ಬೆಳೆಸಿ ಪ್ರಸಿದ್ಧಿ ಹೊಂದಿದ್ದಾರೆ.