ಪುಟ್ಟಣ್ಣ ಗೌಡ ಚಿದ್ಗಲ್ಲು ನಿಧನ

0

ಕೂತ್ಕುಂಜ ಗ್ರಾಮದ ಚಿದ್ಗಲ್ಲು ಪುಟ್ಟಣ್ಣ ಗೌಡರು ನ.17 ರಂದು ರಾತ್ರಿ ನಿಧನರಾದರು.
ಅವರಿಗೆ 78 ವರುಷ ವಯಸ್ಸಾಗಿತ್ತು.

ರಾತ್ರಿ ಅವರು ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾಗಿದ್ದು ತಕ್ಷಣ ಅವರನ್ನು ಅಂಬ್ಯುಲೆನ್ಸ್ ನಲ್ಲಿ ವೈದ್ಯರಲ್ಲಿಗೆ ಕರೆತರಲಾಯಿತು. ವೈದ್ಯರು ಪರೀಕ್ಷಿಸಿ ಅವರು ಮೃತ ಪಟ್ಟಿರುವುದಾಗಿ ತಿಳಿಸಿದರು.
ಮೃತರು ಪುತ್ರರಾದ ಸೀತಾರಾಮ, ದಿನೇಶ್, ವಿಶ್ವಜಿತ್, ಪುತ್ರಿ ಶ್ರೀಮತಿ ಹರಿಣಾಕ್ಷಿ ಕೇಶವ ಹೊಸೊಳಿಕೆ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ .