ಸಂಪಾಜೆ : ಆರ್ ಎಂ ಎಸ್ ಎ ಪ್ರೌಢಶಾಲೆ ಯಲ್ಲಿ ಮೊಬೈಲ್ ಸೈನ್ಸ್ ಎಕ್ಸಿವಿಶನ್

0

ಸಂಪಾಜೆ ಆರ್ ಎಂ ಎಸ್ ಎ ಪ್ರೌಢ ಶಾಲೆಯಲ್ಲಿ ವಿಶ್ವೇಶ್ವರಯ್ಯಇಂಡಸ್ಟ್ರಿಯಲ್ ಆಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ ಬೆಂಗಳೂರು ಇವರ ವತಿಯಿಂದ ಮೊಬೈಲ್ ಸೈನ್ಸ್ ಎಕ್ಸ್ವಿಶನ್ ನ.23ರಂದು ನಡೆಯಿತು.


ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ ಬೆಂಗಳೂರು ಇವರು ಬಾಹ್ಯಕಾಶ ವಿಡಿಯೋ ವೀಕ್ಷಣೆ, ವಿಜ್ಞಾನ ಪ್ರಯೋಗಗಳು, ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಎನ್ ಎಂ ಪಿಯುಸಿ ಅರಂತೋಡು, ಸರಕಾರಿ ಪ್ರಾಥಮಿಕ ಶಾಲೆ ಗೂನಡ್ಕ, ಸವೇರಪುರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಲ್ಲುಗುಂಡಿ ಹಾಗೂ RMSA ಸಂಪಾಜೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ವನ್ನು ಪಡೆದುಕೊಂಡರು.

ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಜಯಶ್ರೀ ವಂದಿಸಿದರು.