ಕಾಯರ್ತೋಡಿ: ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ಮತ್ತು ತುಳಸಿ ಪೂಜೆ

0

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ಮತ್ತು ತುಳಸಿಪೂಜೆಯು ನ.24ರಂದು ರಾತ್ರಿ ಜರುಗಿತು.

ಕೊರತ್ತೋಡಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ನಂತರ ದೇವಾಲಯದ ಪುರೋಹಿತ ನೀಲಕಂಠ ಭಟ್ ಅವರ ನೇತೃತ್ವದಲ್ಲಿ ತುಳಸಿ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಕೆ. ಉಮೇಶ್ ಮತ್ತು ಸದಸ್ಯರುಗಳು, ಊರ ಹಾಗೂ ಪರ ಊರ ಭಕ್ತಭಿಮಾನಿಗಳು ಪಾಲ್ಗೊಂಡರು.