ಚೊಕ್ಕಾಡಿ ಪದವು ವಿಶ್ವ ಹಿಂದೂ ಪರಿಷದ್ ಬಜರಂಗದಳ ವಜ್ರಕಾಯ ಶಾಖೆಯ ವತಿಯಿಂದ ಸಾಮೂಹಿಕ ಗೋಪೂಜೆ ಹಾಗೂ ‌ಧಾರ್ಮಿಕ ಸಭಾ ಕಾರ್ಯಕ್ರಮ

0

ಗೋವು ಬಡತನವನ್ನು ದೂರ ಮಾಡಿದ ಸಂಪತ್ತು : ವಜ್ರದೇಹಿ

ಭಜರಂಗದಳದ ಸಂಘಟನೆಯಿಂದ ಅನೇಕ ಶ್ರದ್ಧ ಕೇಂದ್ರದ ರಕ್ಷಣೆಯಾಗಿದೆ. ಗೋ ಸಂಪತ್ತು ಈ ದೇಶದ ಜೀವಾಳ. ಗೋವಿನೊಡನೆ ಬದುಕು‌ ಸಾಗಿಸಿದವರು ನಾವು. ಬಡತನವನ್ನು ದೂರ ಮಾಡಿದ ಸಂಪತ್ತು ಗೋವು ಎಂದು ವಿದ್ಯಾದೇಹಿ ತೀರ್ಥ ಸಂಸ್ಥಾನ ಶ್ರೀ ವಜ್ರದೇಹಿ ಮಠ ಗುರುಪುರದ ರಾಜಶೇಖರನಂದ ಸ್ವಾಮೀಜಿ ಹೇಳಿದರು.


ಅವರು ಚೊಕ್ಕಾಡಿ ಪದವು ವಿಶ್ವ ಹಿಂದೂ ಪರಿಷದ್ ಬಜರಂಗದಳ ವಜ್ರಕಾಯ ಶಾಖೆ ಯ ವತಿಯಿಂದ ನಡೆದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದಲ್ಲಿ ಗೋವುಪೂಜೆ ನೆರವೇರಿಸಿ ಅಶೀರ್ವಚನ ನೀಡಿದರು.

ಬಜರಂಗದಳ ದಕ್ಷಿಣ ಪ್ರಾಂತದ ಸಹ ಸಂಯೋಜಕ‌ ಮುರಳಿಕೃಷ್ಣ ಹಸಂತ್ತಡ್ಕ ದಿಕ್ಸೂಚಿ ಭಾಷಣ ಮಾಡಿದರು.

ಹಿರಿಯರಾದ ಆನೇಕಾರ್ ಗಣಪಯ್ಯ ಸಭಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಪ್ರವೀಣ್ ಎಸ್. ರಾವ್, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ, ಭಜರಂಗದಳ ಸುಳ್ಯ ಪ್ರಖಂಡದ ಸಹ ಸಂಯೋಜಕ ಸನತ್ ಪದವು, ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕಿ ವೀಣಾ ಮೋಂಟಡ್ಕ, ವಜ್ರಕಾಯ ಶಾಖೆ ಪದವು ಚೊಕ್ಕಾಡಿಯ ಅಧ್ಯಕ್ಷ ವಿನಯ ಪಾಡಾಜೆ, ಸಂಚಾಲಕ ಸತೀಶ್ ಪಿ., ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಹಾಲು ಉ.ಸ.ಸಂಘ ಕುಕ್ಕುಜಡ್ಕದ ಅಧ್ಯಕ್ಷ ರವಿ ತಿರುಮಲೇಶ್ವರ ಭಟ್ ಮತ್ತು ನಾಟಿ ವೈದ್ಯೆ ಚನಿಯಾರು ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ‌

ಕಾರ್ಯಕ್ರಮದಲ್ಲಿ ಡಿಂಪಲ್‌ ಪ್ರಾರ್ಥಿಸಿದರು. ಮುರಳಿ ನಳಿಯಾರು ಪ್ರಸ್ತಾವಿಕವಾಗಿ ಮಾತನಾಡಿ‌ ಸ್ವಾಗತಿಸಿದರು.
ಕಾರ್ಯದರ್ಶಿ ರಾಜೇಶ್ ಎಸ್. ವಂದಿಸಿದರು.
ತೀರ್ಥೆಶ್ ಯಾದವ್ ನಾರ್ಣಕಜೆ ಕಾರ್ಯಕ್ರಮ ನಿರೂಪಿಸಿದರು.
ಅಭಿಜ್ಞ ಭಟ್ ವೈಯಕ್ತಿಕ ಗೀತೆ ಹಾಡಿದರು. ಹರ್ಷಿತಾ ಸನ್ಮಾನ ಪತ್ರ ವಾಚಿಸಿದರು.

ಕಾರ್ಯಕ್ರಮದ ಮೊದಲು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಕೊರತ್ತೋಡಿ ನೆಲ್ಲೂರು ಕೆಮ್ರಾಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಬಳಿಕ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಅಲೇ ಬುಡಿಯೆರ್ ಗೆ ಎಂಬ ತುಳು ನಾಟಕ ಪ್ರದರ್ಶನ ನಡೆಯಿತು.