ಬಜನಿ ಜಗನ್ನಾಥ ರೈಯವರು ಸುಪರಿಂಡೆಂಟ್ಆಫ್ ಪೊಲೀಸ್ ಆಗಿ ಪದೋನ್ನತಿ

0

ಸುಳ್ಯ ತಾಲೂಕಿನ
ಬಾಳಿಲ ಗ್ರಾಮದ ಬಜನಿಗುತ್ತು ಜಗನ್ನಾಥ್ ರೈಯವರು ಸುಪರಿಂಡೆಂಟ್
ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ್ದಾರೆ.

ಬಾಳಿಲ ವಿದ್ಯಾಬೋಧಿನೀ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ
ಪೂರೈಸಿ, ಪಿಯುಸಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ
ಪೂರೈಸಿದರು. ಬಳಿಕ ಕೆಲವು ಸಮಯ ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸಿ, 1996 ರಲ್ಲಿ ಕರ್ನಾಟಕ ಪೊಲೀಸ್
ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇರ್ಪಡೆಗೊಂಡ ಜಗನ್ನಾಥ ರೈ ಯವರು ನಂತರ ಇನ್ಸ್ ಪೆಕ್ಟರ್, ಸರ್ಕಲ್ ಇನ್ಸ್
ಪೆಕ್ಟರ್ ಆಗಿ ಮುಂಬಡ್ತಿ ಹೊಂದಿ, ಅಲ್ಲಿಂದ ಡಿವೈಎಸ್ಪಿ ಯಾಗಿ,
ಸಿಸಿಬಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಬೆಂಗಳೂರಿನ ಗುಪ್ತಚಾರ ವಿಭಾಗದ ಎಸ್ಪಿಯಾಗಿ ಪದೋನ್ನತಿ ಹೊಂದಿದ್ದಾರೆ. ಬಜನಿಗುತ್ತು ದಿ. ರಾಮಯ್ಯ ರೈ ಹಾಗೂ
ಕುಸುಮಾವತಿ ದಂಪತಿಯ ಪುತ್ರರಾಗಿರುವ ಇವರ ಓರ್ವ ಸಹೋದರ ಚಂದ್ರಶೇಖರ ರೈ ಕೆ‌.ಎಸ್.ಆರ್.ಟಿ.ಸಿ.ಯಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿಯ ಬಳಿಕ ಬೆಳ್ಳಾರೆಯಲ್ಲಿ ಶ್ರೀವಾರಿ ಎಂಬ ಅಡಿಕೆ, ಕಾಡುತ್ಪತ್ತಿ ಖರೀದಿ ಕೇಂದ್ರವನ್ನು ನಡೆಸಿದರೆ, ಇನ್ನೊರ್ವ ಸಹೋದರ ಹರೀಶ್ ರೈ ಬಜನಿ ಮಂಗಳೂರಿನ ಪೊಂಪೈ ಕಾಲೇಜಿನಲ್ಲಿ ಶಾರೀರಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.