ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಕಾಣಿಯೂರಿನ ಅಭಿಷೇಕ್ ಬೇಂಗಡ್ಕ ಕಾಣೆ- ಪೊಲೀಸ್ ದೂರು

0

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕಾಣಿಯೂರಿನ ಬೇಂಗಡ್ಕ ಅಭಿಷೇಕ್ ಎಂಬಾತ ಕಾಣೆಯಾಗಿರುವುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಡಿ.04 ರಂದು ದೂರು ದಾಖಲಾಗಿದೆ.

ಕಡಬ ತಾಲೂಕು ಕಾಣಿಯೂರು ಗ್ರಾಮದ ಬೇಂಗಡ್ಕ ಎಂಬಲ್ಲಿನ ನಿವಾಸಿ ಕೆ ಜತ್ತಪ್ಪಗೌಡ ಎಂಬವರು ಠಾಣೆಗೆ ದೂರು ನೀಡಿದ್ದು ದೂರಿನಲ್ಲಿ ಮಗ ಅಭಿಷೇಕ ಎಂಬಾತನು ನಿಂತಿಕಲ್ಲು ಪರಿವಾರ ಪಂಚಲಿಂಗೇಶ್ವರ ಐಟಿಐ ಕಾಲೇಜಿನಲ್ಲಿ ಐಟಿಐ ವಿಧ್ಯಾಭ್ಯಾಸ ಮುಗಿಸಿ ಕಳೆದ ಒಂದು ವರ್ಷದಿಂದ ಬೆಂಗಳೂರಿನ Altigreen ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಸ್ನೇಹಿತರೊಂದಿಗೆ ಬೆಂಗಳೂರಿನಲ್ಲಿಯೇ ವಾಸವಿದ್ದು ಎರಡು ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದನು ಇತ್ತೀಚಿಗೆ ದಿನಾಂಕ 17-11-2023 ರಂದು ಬೆಂಗಳೂರಿನಿಂದ ಮನೆಗೆ ಬಂದು ದಿನಾಂಕ 20-11-2023 ರಂದು ಸಂಜೆ 05:00 ಗಂಟೆಗೆ ಮನೆಯಿಂದ ಬೆಂಗಳೂರಿಗೆ ಹೋಗುತ್ತೇನೆಂದು ತಿಳಿಸಿ ಹೋಗಿರುತ್ತಾನೆ ದಿನಾಂಕ 21-11-2023 ರಂದು ಬೆಳಿಗ್ಗೆ ಸುಮಾರು 06:00 ಗಂಟೆಗೆ ಬೆಂಗಳೂರು ತಲುಪಿ ಆತ ವಾಸ ಇರುವ ರೂಂ ನಲ್ಲಿ ಇರುವುದಾಗಿ ತಿಳಿಸಿರುತ್ತಾನೆ,

ಬಳಿಕ ಪ್ರತಿ ದಿನ ರಾತ್ರಿ ಮನೆಗೆ ಪೋನ್ ಮಾಡುತ್ತಿದ್ದವನು ದಿನಾಂಕ 27-11-2023 ರಂದು ರಾತ್ರಿ ಪೋನ್ ಮಾಡಿರುವುದಿಲ್ಲ ಅದರಂತೆ ದಿನಾಂಕ 28-11-2023 ರಂದು ಆತನ ನಂಬರ್ ಗೆ ಕರೆಮಾಡಿದಲ್ಲಿ ಸ್ವಿಚ್ ಆಫ್ ಆಗಿದ್ದು ಬಳಿಕ ಪದೇ ಪದೇ ಪೋನ್ ಮಾಡಿದಾಗಲೂ ಸ್ವಿಚ್ ಆಫ್ ಎಂದು ಬರುತ್ತಿದ್ದುದರಿಂದ ಆತನ ಸ್ನೇಹಿನ ಅಭಿಷೇಕ ಎಂಬಾತನಿಗೆ ದೂರವಾಣಿ ಕರೆ ಮಾಡಿದಲ್ಲಿ ಅಭಿಷೇಕ ನಮ್ಮ‌ರೂಂ ನಿಂದ 4 ದಿನಗಳ ಹಿಂದೆ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿರುತ್ತಾನೆ ಎಂದು ತಿಳಿಸಿದಂತೆ ಪಿರ್ಯಾದಿದಾರರು ಮಗ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ವಿಚಾರಿಸಿದಲ್ಲಿ ಅಭಿಷೇಕ ನಮ್ಮ‌ಕಂಪನಿಯಲ್ಲಿ ಕೆಲಸ ಬಿಟ್ಟು ಸುಮಾರು 6 ತಿಂಗಳು ಆಗಿರುತ್ತದೆ ಎಂದು ತಿಳಿಸಿರುತ್ತಾರೆ.


ಮಗನ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಆತನ ಸ್ನೇಹಿತರಲ್ಲಿ ವಿಚಾರಿಸಿದಾಗ ಆತ ಅಲ್ಲಿಗೂ ಹೋಗದೇ ಕಾಣೆಯಾಗಿರುತ್ತಾನೆ. ಅಭಿಷೇಕನನ್ನು ದಿನಾಂಕ 20-11-2023 ರಂದು ಸಂಜೆ 05:00 ಗಂಟೆಗೆ ನಮ್ಮ ಮನೆಯಿಂದ ಹೊರಡುವ ವೇಳೆ ಕೊನೆಯ ಬಾರಿ ಮುಖ ನೋಡಿದ್ದು ಆ ಬಳಿಕ ನೋಡಿರುವುದಿಲ್ಲ ಆದುದರಿಂದ ಕಾಣೆಯಾದ ಮಗ ಅಭಿಷೇಕ ಎಂಬಾತನನ್ನು ಪತ್ತೆ ಹಚ್ಚಿ ಕೊಡಬೇಕಾಗಿ ವಿನಂತಿಸಿದ್ದಾರೆ.


ಕಾಣಿಯಾದ ವ್ಯಕ್ತಿಯ ಚಹರೆ:-
ಹೆಸರು:-ಅಭಿಷೇಕ್ ಪ್ರಾಯ 22 ವರ್ಷ
ವಿಧ್ಯಾಭ್ಯಾಸ:-ಐಟಿಐ
ಭಾಷೆ:-ತುಳು,ಕನ್ನಡ
ಮೈಕಟ್ಟು:- ಸಾಧಾರಣ ಶರೀರ
ಮೈ ಬಣ್ಣ ಗೋಧಿ ಮೈ ಬಣ್ಣ,
ಎತ್ತರ ಸುಮಾರು 5 Seth
ಧರಿಸಿದ ಬಟ್ಟೆ ಉದ್ದ ತೋಳಿನ ಕೆಂಪು ಬಣ್ಣದ ಟೀ-ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.