ಗುತ್ತಿಗಾರು : ಸೈoಟ್ ಮೇರಿಸ್ ಚರ್ಚ್ ನಲ್ಲಿ ಆರೋಗ್ಯ ಮಾಹಿತಿ

0

ಸೈoಟ್ ಮೇರಿಸ್ ಚರ್ಚ್, ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು, ವರ್ತಕ ಸಂಘ, ಗುತ್ತಿಗಾರು, ಲಯನ್ಸ್ ಕ್ಲಬ್, ಗುತ್ತಿಗಾರು, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ , ಗುತ್ತಿಗಾರು, ಹಾಗೂ ನೆಮ್ಮದಿ ವೆಲ್ನೆಸ್ ಸೆಂಟರ್ ಪುತ್ತೂರು ಇದರ ನೇತೃತ್ವದಲ್ಲಿ ನಡಯುತ್ತಿರುವ ಉಚಿತ ಫೂಟ್ ಪುಲ್ಸ್ ಥೆರಪಿ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗಾಗಿ ಆರೋಗ್ಯ ಮಾಹಿತಿ ಶಿಬಿರವು ಡಿ.19 ರಂದು ನಡೆಯಿತು. ಜತ್ತಪ್ಪ ಮಾಸ್ಟರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರು ಕಂಪಾನಿಯೋ ಸಂಸ್ಥೆಯಿಂದ ಸೀತಾರಾಮ ಶೆಟ್ಟಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಗುರು ಫಾದರ್. ಆದರ್ಶ್ ಜೋಸೆಫ್ ವಹಿಸಿದ್ದರು, ವೇದಿಕೆಯಲ್ಲಿ ಚಂದ್ರಶೇಖರ್ ಕಡೋಡಿ, ವೆಂಕಪ್ಪ ಗೌಡ ಉಪಸ್ಥಿತರಿದ್ದರು. ಪ್ರಭಾಕರ ಸಾಲಿಯಾನ್ ಸ್ವಾಗತಿಸಿ, ಶ್ರೀಮತಿ ಜಿಸ್ಮಿ ಲಿಜೊ ವಂದಿಸಿದರು.