ನಾಗಪಟ್ಟಣದಲ್ಲಿ ತ್ಯಾಜ್ಯ ಹಾಕಿರುವ ಘಟನೆಗೂ- ನನಗೂ ಏನು ಸಂಬಂಧವಿಲ್ಲ-ಜನಪ್ರತಿನಿಧಿಯಾಗಿ ಜವಬ್ದಾರಿ ನಿರ್ವಹಿಸಿದ್ದೇನೆ : ರಿಯಾಝ್ ಕಟ್ಟೆಕ್ಕಾರ್

0

ನಗರದ ಗುರುಂಪು ವಾರ್ಡ್ ನಿಂದ ಚರಂಡಿಯಿಂದ ತೆಗೆದ ತ್ಯಾಜ್ಯವನ್ನು ನಾಗಪಟ್ಟಣ ಬಳಿ ಸುರಿದ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ.


ಗುತ್ತಿಗೆದಾರ ಕುಮಾರ್ ಎಂಬವರು ಕೆಲಸ ನಿರ್ವಹಿಸುತ್ತಿದ್ದು ಟ್ರಾಕ್ಟರ್ ಮೂಲಕ
ತ್ಯಾಜ್ಯವನ್ನು ಹಾಕಿದ ಕುರಿತು ನಾಗಪಟ್ಟಣದ ಸ್ಥಳೀಯರು ನನಗೆ ದೂರವಾಣಿ ಮೂಲಕ ವಿಷಯ ತಿಳಿಸಿದ ಮೇರೆಗೆ ನಾನು ಕೂಡಲೇ ಅಲ್ಲಿಗೆ ಹೋಗಿದ್ದೇನೆ.


ಇಲ್ಲಿ ತ್ಯಾಜ್ಯ ಹಾಕಿರುವುದು ತಪ್ಪು ಇದನ್ನು ತೆಗೆಯಬೇಕು ಎಂದು ಕುಮಾರ್ ರವರಿಗೆ ಮನವರಿಕೆ ಮಾಡಿದ್ದೇನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿ ಯವರು ಮತ್ತು ಸ್ಥಳೀಯರು ಆಕ್ರೋಶಭರಿತರಾಗಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ವೇಳೆಯಲ್ಲಿ
ತ್ಯಾಜ್ಯ ಹಾಕಿದ ತಪ್ಪಿಗಾಗಿ ದಂಡ ಕಟ್ಟಬೇಕು ಮತ್ತು ಅದನ್ನು ಅಲ್ಲಿಂದ ಕೂಡಲೇ ತೆಗೆಸುವಂತೆ ಸೂಚಿಸಿದ ಮೇರೆಗೆ ನಾನು ಕುಮಾರ್ ರವರ ಪರವಾಗಿ ನಗರ ಪಂಚಾಯತಿನ ಜನಪ್ರತಿನಿಧಿ ಜವಬ್ದಾರಿ ಸ್ಥಾನದಿಂದ ತೆಗೆಸುವುದಾಗಿ ಒಪ್ಪಿಕೊಂಡಿದ್ದೇನೆ. ಅದರಂತೆ ಮರುದಿನ ಕುಮಾರ್ ಮತ್ತು ನಾನು ಪಂಚಾಯತ್ ಗೆ ಹೋಗಿ ದಂಡ ಪಾವತಿಸಿದ್ದೇವೆ. ಜೆಸಿಬಿ ಸಿಗದ ಕಾರಣದಿಂದ ರಾತ್ರಿ ಕೂಲಿ ಆಳುಗಳನ್ನು ಕರೆದುಕೊಂಡು ಬಂದು ತ್ಯಾಜ್ಯವನ್ನು ಅಲ್ಲಿಂದ ತೆಗೆಸುವ ಕೆಲಸವನ್ನು ಪೂರೈಸಲಾಗಿದೆ.