ಸಹಕಾರ ರಂಗದ ಅಭ್ಯರ್ಥಿಗಳಿಂದ ನಾಮಪತ್ರ
ಸುಳ್ಯ ಸಿ.ಎ. ಬ್ಯಾಂಕ್ ಚುನಾವಣೆ ಡಿ.31 ರಂದು ನಡೆಯಲಿದ್ದು ನಾಮಪತ್ರ ಸಲ್ಲಿಕೆ ಡಿ.19 ರಿಂದ ಅವಕಾಶ ನೀಡಲಾಗಿತ್ತು. ಡಿ.19ಮತ್ತು 20 ರಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಇಂದು ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.
ಸಾಲಗಾರರ ಕ್ಷೇತ್ರದಿಂದ ಸಹಕಾರ ರಂಗದ ಅಭ್ಯರ್ಥಿಯಾಗಿ ಜಾಲ್ಸೂರು ಬಿಜೆಪಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಕರುಣಾಕರ ಅಡ್ಪಂಗಾಯರು ಪ್ರಥಮವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಸಹಕಾರ ರಂಘದ ಕಡೆಯಿಂದ ಪ.ಪಂಗಡ ಕ್ಷೇತ್ರದಿಂದ ವಿಶ್ವನಾಥ ನೆಲ್ಲಿಬಂಗಾರಡ್ಕ, ಮಹಿಳಾ ಮೀಸಲು ಕ್ಷೇತ್ರದಿಂದ ಜಯಂತಿ ಕೊಯಿಕುಳಿ, ಸಾಮಾನ್ಯ ಸ್ಥಾನದಿಂದ ಶಶಿಧರ ಶಿರಾಜೆ, ರಾಮಚಂದ್ರ ಪೆಲ್ತಡ್ಕ ನಾಮಪತ್ರ ಸಲ್ಲಿಸಿದ್ದಾರೆ.
ಎ ಕ್ಷೇತ್ರದ ಅಭ್ಯರ್ಥಿಯಾಗಿ ರಾಮಣ್ಣ ಪೂಜಾರಿ ಪೊಡುಂಬ, ಬಿ ಮೀಸಲು ಕ್ಷೇತ್ರದಿಂದ ವಿಜಯಕುಮಾರ್ ಪಡ್ಪು ನಾಮಪತ್ರ ಸಲ್ಲಿಸಿದರು. ಸಹಕಾರ ರಂಘದ ಸಾಲಗಾರರಲ್ಲದ ಕ್ಷೇತ್ರದಿಂದ ಲತೀಶ್ ಕುಮಾರ್ ಕೆ.ಪಿ. ನಾಮಪತ್ರ ಸಲ್ಲಿಸಿದರು.
ಉಳಿದ ಅಭ್ಯರ್ಥಿಗಳು ಇನ್ನಷ್ಟೆ ನಾಮಪತ್ರ ಸಲ್ಲಿಸಬೇಕಾಗಿದೆ.
ಸಹಕಾರ ಭಾರತಿ ಅಭ್ಯರ್ಥಿಗಳು ಕೂಡಾ ಇಂದೇ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆಂದು ತಿಳಿದುಬಂದಿದೆ.
ಚುನಾವಣಾಧಿಕಾರಿ ಶಿವಲಿಂಗಯ್ಯ ನಾಮಪತ್ರ ಸ್ವೀಕರಿಸಿದರು.