ಪಂಜ: ವಿಕಸಿತ ಭಾರತ ಸಂಕಲ್ಪ ಯಾತ್ರೆ

0

ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರ ನರೇಂದ್ರ ಮೋದಿ ಸರ್ಕಾರ : ಸಂಸದ ನಳಿನ್ ಕುಮಾರ್ ಕಟೀಲ್

“ಭಾರತ ವಿಶ್ವ ಗುರುವಾಗಿದೆ.ಆಮೇರಿಕದ ದೊಡ್ಡ ಪತ್ರಿಕೆಯ ಸರ್ವೆ ಪ್ರಕಾರ ನರೇಂದ್ರ ಮೋದಿ ಜಗತ್ತಿನ ಜನಪ್ರಿಯ ನಾಯಕ. ಈ ಮೂಲಕ ಭಾರತ ಕೀರ್ತಿ ಎತ್ತರಕ್ಕೆ ಏರಿದೆ . ಹಿಂದೆ ಆಗದ ದೇಶದ ಅಭಿವೃದ್ಧಿ ಉತ್ತಮ ಬದಲಾವಣೆ ಈಗ ಆಗಿದೆ. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಮನೆ, ನೀರು,ಶೌಚಾಲಯ, ವಿದ್ಯುತ್, ಗ್ಯಾಸ್, ಅಕ್ಕಿ, ವೃದ್ಧಾಪ್ಯ ವೇತನ,ಕಿ‌ಸನ್ ಸಮ್ಮಾನ್ ,
ಜನ್ ಧನ್,ಫಸಲ್ ವಿಮೆ, ಆಯುಷ್ಮಾನ್, ಮುದ್ರಾ ಯೋಜನೆ, ಫೆಂಕ್ಷನ್ ಯೋಜನೆ , ವಿಶ್ವ ಕರ್ಮ ಯೋಜನೆ ಹೀಗೆ ಅನೇಕ ಅದ್ಭುತ ಯೋಜನೆಗಳು ಬಡವರ ಸಂರಕ್ಷಣೆ, ಕೃಷಿಕರು ಹಾಗೂ ಎಲ್ಲಾ ಜನರ ಅಭಿವೃದ್ಧಿಗಾಗಿ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರ ಆಡಳಿತವಾಗಿದೆ. ಕೋವಿಡ್ ಸಂದರ್ಭದಲ್ಲಿ
ಎಲ್ಲರಿಗೂ ಮೂರು ಲಸಿಕೆ ಉಚಿತವಾಗಿ ನೀಡಿರುವ ಜಗತ್ತಿನಲ್ಲಿ ಏಕೈಕ ರಾಷ್ಟ್ರ ನಮ್ಮದು. ಪ್ರತಿಯೊಬ್ಬನಿಗೆ ಯೋಜನೆಗಳು ತಲುಪ ಬೇಕೆಂದು,ನಿಮ್ಮ ಮನೆ ಬಾಗಿಲಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆ” .ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಡಿ.29 ರಂದು
ಪಂಜ ಗ್ರಾಮ ಪಂಚಾಯತ್ ಪಂಜ ಮತ್ತು ಕೆನರಾ ಬ್ಯಾಂಕ್ ಪಂಜ ಇವರ ವತಿಯಿಂದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕಿ ಭಾಗೀರಥಿ ಮುರುಳ್ಯ ರವರು ಮಾತನಾಡಿ ” ಭಾರತ ದೇಶ ಪ್ರಕಾಶಮಾನ ಆಗಿ ಹೊಳೆಯಲು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರಣ. ಸರಕಾರದ ಯೋಜನೆಗಳು ಕಟ್ಟ ಕಡೆಯ ಜನರಿಗೂ ತಲುಪ ಬೇಕು ಮತ್ತು ಯೋಜನೆಗಳ ಸಂಪೂರ್ಣ ಅರಿವು ಮೂಡಿಸುವ ಕಾರ್ಯಕ್ರಮ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಆಶೀರ್ವದಿಸಿ”ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಉದ್ಘಾಟಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಸಭಾಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಪರವಾಗಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿ.ಚಂದ್ರಶೇಖರ ಶಾಸ್ತ್ರಿ ಮಾತನಾಡಿದರು.

ಪಂಜ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಘವೇಂದ್ರತೇಜಾ ರವರು ಬ್ಯಾಂಕ್ ನಲ್ಲಿರುವ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ಕೆನರಾ ಬ್ಯಾಂಕ್ ನ ಎಫ್ ಎಲ್ ಸಿ ಶ್ರೀಮತಿ ಸುಜಾತ ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ, ಕಾರ್ಯದರ್ಶಿ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಕಸಿತ ಭಾರತ ಸಂಕಲ್ಪ ಕುರಿತು ತೆರೆದ ವಾಹನದಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶನ ನಡೆಯಿತು.

ಸನ್ಮಾನ : ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವರನ್ನು ಸನ್ಮಾನಿಸಲಾಯಿತು.
ಕ್ರೀಡಾ ಪಟು ಜಿನ್ನಪ್ಪ ಗುಂಡಡ್ಕ, ಉದ್ಯಮಿ ಶ್ರೀಮತಿ ಆಶಾ ಮನು ಯಂ ತೊಂಡಚ್ಚನ್, ಪ್ರಗತಿಪರ ಕೃಷಿಕ ನೇಮಣ್ಣ ಗೌಡ ನೇರಳ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಯಂತ
ಸ್ವಾಗತಿಸಿದರು ಮತ್ತು ವಂದಿಸಿದರು.ಗೋಪಾಲಕೃಷ್ಣ ಪ್ರಾಸ್ತಾವಿಕ ಮಾತನಾಡಿದರು. ಜಯರಾಮ ಕಲ್ಲಾಜೆ ನಿರೂಪಿಸಿದರು.

ಕಿಸಾನ್ ಕ್ರೆಡಿಟ್ ಕಾರ್ಡ್, ಆಯುಷ್ಮಾನ್ ಕಾರ್ಡ್ , ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನೆ ,ಉಜ್ವಲ್ ಗ್ಯಾಸ್
ಹಾಗೂ ಇನ್ನಿತರ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಹಾಗೂ ನೋಂದಾವಣೆ ನಡೆಯಿತು
.