ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವ ಆರಂಭ, ಶಾಶ್ವತ ವಿದ್ಯುತೀಕರಣ ಉದ್ಘಾಟನೆ

0

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಜ. 4ರಂದು ಆರಂಭಗೊಂಡು ಜ. 8ರ ತನಕ ಜರಗಲಿದೆ.


ಜ. 4ರಂದು ಬೆಳಿಗ್ಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವ ಆರಂಭಗೊಂಡಿತು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಭಾರತೀ ತೀರ್ಥ ಸಭಾಂಗಣ ಮತ್ತು ಪಾಕಶಾಲೆಗೆ ಪ್ರಣಾಮ್ ರೈ ಅರ್ಗುಡಿಯವರು ಅಂದಾಜು ರೂ. 3ಲಕ್ಷ ವೆಚ್ಚದಲ್ಲಿ ನೀಡಿದ ಶಾಶ್ವತ ವಿದ್ಯುತೀಕರಣದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶ್ರೀಮತಿ ಮತ್ತು ಶ್ರೀ ಸುಂದರ ಕಾಂಜಿ, ವಿಶ್ವನಾಥ ರೈ ಅರ್ಗುಡಿ, ಶ್ರೀಮತಿ ಶಾಂಭವಿ ವಿ. ರೈಯವರು ವಿದ್ಯುತೀಕರಣವನ್ನು ಉದ್ಘಾಟಿಸಿದರು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀವತ್ಸ ಎಂ.ವಿ, ಧಾರ್ಮಿಕ ಉತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಗೌಡ ಪಂಡಿ, ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಮತ್ತು ಪದಾಧಿಕಾರಿಗಳು ಸೇರಿದಂತೆ ವಿವಿಧ ಬೈಲುವಾರು ಸಮಿತಿಗಳ ಸಂಚಾಲಕರು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶೃಂಗೇರಿ ಗುರುದೇವತಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಜ. 5ರಿಂದ‌ 8ರ ತನಕ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಜಾತ್ರೋತ್ಸವ ನಡೆಯಲಿದ್ದು, ಜ. 7ಕ್ಕೆ ಬ್ರಹ್ಮ ರಥೋತ್ಸವ, ಬಳ್ಪ ಬೆಡಿ ನಡೆಯಲಿದೆ. ಜ. 8ಕ್ಕೆ ಅವಭೃತೋತ್ಸವದ ಬಳಿಕ ಧ್ವಜಾವರೋಹಣದೊಂದಿಗೆ ಜಾತ್ರೋತ್ಸವ ಸಮಾಪನಗೊಳ್ಳಲಿದೆ.