ಕರ್ನಾಟಕ ರಾಜ್ಯ ಎನ್.ಎಸ್.ಯು.ಐ. ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯರವರು ಮಂಗಳೂರು ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಸರಕಾರದಿಂದ ನೇಮಕಗೊಂಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಅವರ ಸೂಚನೆಯಂತೆ ರಾಜ್ಯ ಸರ್ಕಾರ ಇವರ ನೇಮಕದ ಆದೇಶ ಹೊರಡಿಸಿದೆ.
ಸವಾದ್ ಸುಳ್ಯ ಸುಳ್ಯದ ಗಾಂಧಿನಗರದವರು. ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಪಡೆದು ಗಾಂಧಿನಗರ ಸರಕಾರಿ ಪ್ರೌಢಶಾಲೆಗೆ ಸೇರಿದ್ದರು. 14 ನೇ ವಯಸ್ಸಿನಲ್ಲಿ ಸರಕಾರಿ ಪ್ರೌಢ ಶಾಲೆ ಗಾಂಧೀನಗರ ಸುಳ್ಯ ಇದರ ವಿದ್ಯಾರ್ಥಿ ಸಂಘದ ಉಪನಾಯಕನಾಗಿ ಚುನಾಯಿತರಾಗಿದ್ದ ಅವರು 10 ನೇ ತರಗತಿಯಲ್ಲಿ ಚುನಾಯಿತ ನಾಯಕನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು.
ಇವರು ತಮ್ಮ ಶಾಲಾ ದಿನಗಳಲ್ಲೇ ಕಾಂಗ್ರೆಸ್ ಬಾಲ ಸೇವಾದಳದಲ್ಲಿ ಸಕ್ರಿಯರಾಗಿದ್ದವರು. 2009 ರಲ್ಲಿ ತಾನು ಹೈಸ್ಕೂಲ್ ನಲ್ಲಿ ಓದುತ್ತಿರುವಾಗ NSUI ವಿದ್ಯಾರ್ಥಿ ಸಂಘಟನೆಗೆ ಕಾಲಿಟ್ಟ ಸವಾದ್ ಸುಳ್ಯ ಈಗ ಅದರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
*ಸುಳ್ಯದ ಗಾಂಧಿನಗರದಲ್ಲಿ ತನ್ನ ಪಿಯುಸಿ ಶಿಕ್ಷಣದ ಸಂದರ್ಭದಲ್ಲಿ NSUI ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ, ಸುಳ್ಯ ನಗರ ಅಧ್ಯಕ್ಷರಾಗಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಸರ್ವ ಕಾಲೇಜು ಸಂಘದ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.
NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಂಚಾಲಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.