ಸುಳ್ಯ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಬ್ರಹ್ಮಕಲಶೋತ್ಸವದ ಮನವಿ ಪತ್ರ ಬಿಡುಗಡೆ

0

ಸುಳ್ಯ ಶ್ರೀ ರಾಮ ಪೇಟೆಯಲ್ಲಿರುವ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು 2024 ಫೆಬ್ರವರಿ 25 ರಿಂದ 28 ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಮನವಿ ಪತ್ರ ಬಿಡುಗಡೆ ಯು ಜ.4 ರಂದು ಮಂದಿರದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಮನವಿ ಪತ್ರ ಬಿಡುಗಡೆಗೊಳಿಸಿದರು.


ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ರವರುಬ್ರಹ್ಮಕಲಶೋತ್ಸವದ ಪೂರ್ವತಯಾರಿಯ ಕುರಿತು ವಿಶ್ಲೇಷಣೆ ನಡೆಸಿದರು. ವಿಸ್ತೃತ ಉಪ ಸಮಿಗಳನ್ನು ಮುಂದಿನ ಸಭೆಯಲ್ಲಿ ರಚಿಸುವ ಬಗ್ಗೆ ಪ್ರಸ್ತಾಪಿಸಿದರು.
ಜ.7 ರಂದು ಸಮಿತಿಯ ಪದಾಧಿಕಾರಿಗಳು ಹಾಗೂ ಸುಳ್ಯ ನಗರದ ಎಲ್ಲಾ ವಾರ್ಡಿನ ಭಕ್ತಾದಿಗಳನ್ನು ಸೇರಿಸಿ ಸಭೆ ನಡೆಸುವುದಾಗಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಎಂ.ಬಿ.ಸದಾಶಿವ, ಅಶೋಕ ಪ್ರಭು ಸುಳ್ಯ, ದೇವರಾಜ್ ಆಳ್ವ, ಮಂದಿರದ ಅರ್ಚಕ ಗೋಪಾಲಕೃಷ್ಣ ಪಿ, ಧರ್ಮದರ್ಶಿ
ಮಂಡಳಿಯ ಕಾರ್ಯದರ್ಶಿ ಶ್ರೀನಿವಾಸ ಸುಳ್ಯ,ಸದಸ್ಯರಾದ ಮಹಾಬಲ ಕೇರ್ಪಳ, ಗೋಪಾಲ ಎಸ್ ನಡುಬೈಲು, ಭಾಸ್ಕರ ನಾಯರ್ ಅರಂಬೂರು, ಪುರುಷೋತ್ತಮ ಕೆ.ಎಸ್, ಸಂದೇಶ್ ಕುರುಂಜಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.