ಸುಬ್ರಹ್ಮಣ್ಯ: ಕೆ.ಎಸ್.ಆರ್.ಟಿ.ಸಿ ರಸ್ತೆ ಶೌಚಾಲಯ ಕಾಮಗಾರಿ ವಿಳಂಬ : ಪ್ರಯಾಣಿಕರಿಗೆ, ಅಂಗಡಿಯವರಿಗೆ ತೊಂದರೆ

0

ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ರಸ್ತೆ ಕಾಮಗಾರಿ ಹಾಗೂ ಶೌಚಾಲಯ ಕಾಮಗಾರಿ ವಿಳಂಬ ದೋರಣೆ ಅನುಸರಿಸುತಿದ್ದು ಪ್ರಯಾಣಿಕರು, ಅಂಗಡಿಯವರು ಕಷ್ಟ ಪಡುವ ಪರಿಸ್ಥಿತಿ ಒದಗಿಬಂದಿದೆ.

ಕಳೆದರೆಡು ತಿಂಗಳ ಹಿಂದೆ ಬಸ್ ತಂಗುದಾಣಕ್ಕೆ ಹೋಗುವ ಇದ್ದ ರಸ್ತೆಯನ್ನು ಆಗೆದು ಹಾಕಲಾಗಿದ್ದರು ಇನ್ನೂ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಶೌಚಾಲಯದ ದುಸ್ತಿಯೂ ಇದೇ ರೀತಿಯಾಗಿದ್ದು ಮಹಿಳೆಯರು ಮತ್ತು ಪುರುಷರು ಒಂದೇ ಭಾಗದ ಶೌಚಾಲಯಕ್ಕೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಶೌಚಾಲಯದ ಎದುರು ಭಾಗ ಕಾಮಗಾರಿಗೆ ಬೇಕಾದ ಸಲಕರಣೆಗಳನ್ನು ತಂದು ರಾಶಿ ಹಾಕಲಾಗಿದ್ದು ಇದರಿಂದಲೋ ಜನರಿಗೆ ತೊಂದರೆ ಆಗುತ್ತಿದೆ. ಪುರುಷರು ಉಪಯೋಗಿಸುವ ಶೌಚಾಲಯಕ್ಕೆ ತಾತ್ಕಾಲಿಕವಾಗಿ ನೆಲೆಯಲ್ಲಿ ಮಹಿಳೆಯರು ಹೋಗುತ್ತಿದ್ದು, ಹಲವು ದಿನಗಳಿಂದ ಇದೇ ಮುಂದುವರೆದಿದೆ. ಇದರಿಂದ ಮಹಿಳೆಯರು ಮುಜುಗರ ಪಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ. ಕಾಮಗಾರಿ ವಿಳಂಬವಾಗಿರುವ ಕಾರಣ ಬಸ್ ಗಳು ತಂಗುದಾಣಕ್ಕೆ ಬರದ ಕಾರಣ ಪ್ರಯಾಣಿಕರು ಮತ್ತು ತಂಗುದಾಣದಲ್ಲಿ ಅಂಗಡಿ ಹೊಂದಿರುವವರು, ಹೋಟೆಲ್ ಗಳಿಗೆ ಆರ್ಥಿಕವಾಗಿ ತೊಂದರೆ ಉಂಟಾಗಿದೆ. ಕಳೆದೆರಡು ದಿನಗಳಿಂದ ಕಾಮಗಾರಿ ಮರು ಆರಂಭವಾಗಿದ್ದರೂ ವಿಳಂಬ ದೋರಣೆಯಂತೂ ನಡೆದೇ ಇದೆ. ಷಷ್ಠಿ ಮಹೋತ್ಸವ ಮುಗಿದ ತಕ್ಷಣ ಕೆಲಸ ಆರಂಭಿಸುವುದಾಗಿ ಭರವಷೆ ದೊರೆತಿದ್ದರೂ ವಿಳಂಬ ದೊರಣೆಯಿಂದ ಜನರಂತೂ ವ್ಯವಸ್ಥೆ ಬಗ್ಗೆ ಸುಸ್ತಾಗಿ ಹೋಗಿದ್ದಾರೆ.