ಮುರುಳ್ಯ ಶಾಲೆಗೆ ಡಂಬಲ್ಸ್ ಹಾಗೂ ಹೂಪ್ಸ್ ಕೊಡುಗೆ

0

ಮುರುಳ್ಯ ಸ. ಉ. ಹಿ. ಪ್ರಾಥಮಿಕ ಶಾಲೆಗೆ ಹಿರಿಯ ವಿದ್ಯಾರ್ಥಿ ಬಾಲಕೃಷ್ಣ ಕೆ. ನೂಜಾಡಿಯವರು ಶಾಲೆಯ ಮಕ್ಕಳ ದೈಹಿಕ ,ಶೈಕ್ಷಣಿಕ ಹಿತದೃಷ್ಟಿಯಿಂದ ೧೨೦ ಜೊತೆ ಡಂಬೆಲ್ಸ್ ಮತ್ತು ೧೧೦ ಜೊತೆ ಹೂಪ್ಸ್ ಗಳನ್ನು ಕೊಡುಗೆಯಾಗಿ ನೀಡಿದರು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಅವಿನಾಶ್ ದೇವರಮಜಲು, ಉಪಾಧ್ಯಕ್ಷರಾದ ಶ್ರೀಮತಿ ಸವಿತ ಮತ್ತು ಸದಸ್ಯರು, ಶಾಲೆಯ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡರ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಮಧು ಯತೀಶ್, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಶಶಿಕಲಾ, ಶಿಕ್ಷಕ ವೃಂದದವರು ಮಕ್ಕಳ ಉಪಸ್ಥಿಯಲ್ಲಿ ಹಸ್ತಂತಾರಿಸಲಾಯಿತು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಸುಧೀನ್ ರೈ ಕಾರ್ಯಕ್ರಮ ನಡೆಸಿಕೊಟ್ಟರು.