ರೆಂಜಾಳ ಜಾತ್ರೋತ್ಸವ ಆರಂಭ – ಶ್ರೀ ದೇವರಿಗೆ ರಂಗಪೂಜೆ

0

ಮರ್ಕಂಜ ಮತ್ತು ನೆಲ್ಲೂರುಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗೊಳಪಟ್ಟ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರೋ ತ್ಸವ ಆರಂಭಗೊಂಡಿದ್ದು, ಶ್ರೀ ದೇವರಿಗೆ ಭಜನಾ ಸೇವೆ, ರಂಗಪೂಜೆ ನಡೆಯುತ್ತಿದೆ. ಜ.30 ಮತ್ತು 31ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


ಜ.24 ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಿತು. ಬಳಿಕ 12 ತೆಂಗಿನಕಾಯಿ ಗಣಪತಿ ಹವನ, ಏಕಾದಶ ರುದ್ರಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ. ರಾತ್ರಿ ಶ್ರೀ ಸದಾಶಿವ ಮಹಾಗಣಪತಿ ದೇವರಿಗೆ ಸಾರ್ವಜನಿಕ ರಂಗಪೂಜೆ ಮತ್ತಹ ಭಜನಾ ಸೇವೆ ನಡೆಯಿತು.

ಪ್ರತಿದಿನ ಸಂಜೆ ಭಜನಾ ಸೇವೆ ಮತ್ತು ಅನ್ನಸಂತರ್ಪಣೆ ನಡೆಯುತ್ತಿದೆ. ಈ ವರ್ಷದಿಂದ ಶ್ರೀ ದೇವರಿಗೆ ವಿಶೇಷವಾಗಿ ತುಲಾಭಾರ ಸೇವೆ ನಡೆಯಲಿದೆ.

ಜ.30ರಂದು ಸಂಜೆ ತಂತ್ರಿಗಳ ಆಗಮನದ ಬಳಿಕ ಪ್ರಾರ್ಥನೆ, ಪುಣ್ಯಾಹ, ಪ್ರಾಸಾದ ಶುದ್ಧಿ ಬಳಿಕ ವಾಸ್ತು ರಕ್ಷೋಘ್ನ ಹೋಮ ಮತ್ತು ವಾಸ್ತು ಬಲಿ ನಡೆಯಲಿದೆ. ಜ.31ರಂದು ಬೆಳಿಗ್ಗೆ ಗಣಪತಿ ಹೋಮ ಬಳಿಕ ಬಿಂಬ ಶುದ್ಧಿ, ಕಲಶ ಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ ನಡೆದು ಸಾನಿಧ್ಯ ಕಲಶ ಪೂಜೆ ಹಾಗೂ ಸಾನ್ನಿಧ್ಯ ಕಲಶಾಭಿಷೇಕ ನಡೆಯಲಿದೆ.
ರಾತ್ರಿ ಪೂಜೆ ಬಳಿಕ 8 ಗಂಟೆಯಿಂದ ಭೂತಬಲಿ, ಸೇವಾಬಲಿಗಳು, ನೃತ್ಯ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮತ್ತು ಸಂಪ್ರೋಕ್ಷಣೆ ಹಾಗೂ ಮಂತ್ರಾಕ್ಷತೆ ನಡೆಯಲಿದೆ.