ಸುಳ್ಯದಲ್ಲಿ‌ ಜೆಡಿಎಸ್ ಪದಾಧಿಕಾರಿಗಳ ಸಭೆ

0

ಜನತಾದಳ ಜಾತ್ಯಾತೀತ ಪಕ್ಷದ ಪದಾಧಿಕಾರಿಗಳ ಸಭೆಯು ಪಕ್ಷದ ಕಛೇರಿಯಲ್ಲಿ ಫೆ.10ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ ಇವರು ವಹಿಸಿದ್ದರು. ಈ ಸಭೆಯಲ್ಲಿ ಪ್ರಸ್ತುತ ರಾಜ್ಯದಲ್ಲಿನ ರಾಜಕೀಯ ಬೆಳವಣಿಗಳ ಬಗ್ಗೆ ಚರ್ಚೆ ನಡೆಯಿತು. ಹಾಗೆಯೇ ಎಪ್ರಿಲ್ 2024ರ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಾಗೂ ಮುಂಬರುವ ಜಿಲ್ಲಾ ಪಂಚಾಯತ್ ಹಾಗು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪ್ರದೇಶ ಜನತಾದಳದ ರಾಜ್ಯಾಧ್ಯಕ್ಷರು ತೀರ್ಮಾನಿಸುವ ಆದೇಶದಂತೆ ಪಕ್ಷವು ಕಾರ್ಯನಿರ್ವಹಿಸುವುದೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಗೆಯೇ ಮಹಿಳಾ ಘಟಕದ ಹಾಗೂ ಇತರ ಸಮಿತಿಗಳನ್ನು ರಚಿಸಿ ಪಕ್ಷವನ್ನು ಬಲಪಡಿಸುವ ಬಗ್ಗೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡ, ಮಹಿಳಾ ಅಧ್ಯಕ್ಷರಾದ ಮಹಾಲಕ್ಷ್ಮಿ ಕೊರಂಬಡ್ಕ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಧ್ಯಕ್ಷರಾದ ಎಂ.ಬಿ. ಚೋಮ, ತಾಲೂಕು ಉಪಾಧ್ಯಕ್ಷರಾದ ರೋಹನ್ ಪೀಟರ್, ಖಜಾಂಚಿ ಸುರೇಶ್ ನಡ್ಕ, ಅರಂತೋಡು ಗ್ರಾಮ ಉಸ್ತುವಾರಿ ದೇವರಾಮ ಬಾಳಕಜೆ, ಕಛೇರಿ ಕಾರ್ಯದರ್ಶಿ ಗೋಪಾಲ ಪೂರ್ಲಮಕ್ಕಿ ಹಾಗೂ ಕಾರ್ಯಕರ್ತರಾಗಿರುವ ರಾಮಚಂದ್ರಗೌಡ, ಎಂ ಹುಕ್ರಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ರಾಕೇಶ್ ಕುಂಟಿಕಾನರವರು ಎಲ್ಲರನ್ನು ಸ್ವಾಗತಿಸಿ ವಂದಿಸಿದರು.