ಐವರ್ನಾಡು : ನಿಡುಬೆ ಬರೆಮೇಲು ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

0

ಐವರ್ನಾಡು ಗ್ರಾಮ ಪಂಚಾಯತ್ 15 ನೇ ಹಣಕಾಸು ಯೋಜನೆ ಹಾಗೂ ನರೆಗಾ ಯೋಜನೆಯ ಒಟ್ಟು 4 ಲಕ್ಷ ವೆಚ್ಚದಲ್ಲಿ ನಿಡುಬೆ ಬರೆಮೇಲು ರಸ್ತೆ ಕಾಂಕ್ರೀಟೀಕರಣಗೊಳ್ಳಲಿದ್ದು ಗುದ್ದಲಿ ಪೂಜೆಯು ಫೆ.19 ರಂದು ನಡೆಯಿತು.
ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಕಲಾ ಜೆ.ವಿಯವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ವಾಸುದೇವ ನಿಡುಬೆ,ಮಹೇಶ ಜಬಳೆ,ಶೇಖರ ಮಡ್ತಿಲ,ಶಾಂತಾರಾಮ ಕಣಿಲೆಗುಂಡಿ,ರಾಜೇಶ್ ಭಟ್ ಬಾಂಜಿಕೋಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.