ಮೇನಾಲ ಕ್ಷೇತ್ರದಲ್ಲಿಪ್ರತಿಷ್ಠಾ ವಾರ್ಷಿಕ ದುರ್ಗಾಪೂಜೆ

0

ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ 31 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ದುರ್ಗಾಪೂಜೆಯು ಇಂದು ನಡೆಯುವುದು.

ಫೆ.22ರಂದು ಗಣಹೋಮ, ನಾಗತಂಬಿಲ, ಗುಳಿಗ ತಂಬಿಲ ನಡೆಯಿತು. ಫೆ.23ರಂದು ಮಧ್ಯಾಹ್ನ ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯುತು.

ರಾತ್ರಿ ಭಜನಾ ಕಾರ್ಯಕ್ರಮ, ಬಳಿಕ ದುರ್ಗಾಪೂಜೆ. ರಾತ್ರಿ 10.30 ರಿಂದ ಮಹಾಪೂಜೆ ದೇವಿ ಸೇವೆ, ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯುವುದು ಎಂದು ಕ್ಷೇತ್ರದ ಧರ್ಮದರ್ಶಿ ಪದ್ಮನಾಭ ಸ್ವಾಮಿಯವರು ತಿಳಿಸಿದ್ದಾರೆ.