ಜಟ್ಟಿಪಳ್ಳದಿಂದ ಕೊಡಿಯಾಲಬೈಲ್ ವರೆಗೆ ಡಾಮರೀಕರಣ; ರಸ್ತೆ ಬಂದ್

0

ಪರ್ಯಾಯ ರಸ್ತೆ ಬಳಸುವಂತೆ ಸೂಚನೆ

ಸುಳ್ಯ ಜಟ್ಟಿಪಳ್ಳದಿಂದ ಕೊಡಿಯಾಲಬೈಲ್ ಸೇತುವೆಯವರೆಗೆ ರೂ.30 ಲಕ್ಷ ಅನುದಾನದಲ್ಲಿ ಡಾಮರೀಕರಣ ಕಾರ್ಯ ನಡೆಯುತ್ತಿದ್ದು,ಕೆಲಸ ವೇಗವಾಗಿ ಸಾಗುವ ಉದ್ದೇಶದಿಂದ ವಾಹನ ಸಂಚಾರ ನಿಷೇಧಿಸಲಾಗಿದೆ.


ಈ ರಸ್ತೆಯಲ್ಲಿ ಸಾಗುವವರು ಹಳೆಗೇಟು ಜಯನಗರಕ್ಕಾಗಿ ಸಾಗಿ ಕುದ್ಪಾಜೆಯಲ್ಲಿ ಆ ರಸ್ತೆಯನ್ನು ಸಂಪರ್ಕಿಸಬಹುದು‌ ಅಥವಾ ದುಗ್ಗಲಡ್ಕದಕ್ಕೆ ಬಂದು ಆ ರಸ್ತೆಯಲ್ಲಿ ಹಿಂದಕ್ಕೆ ಬರಬೇಕಾಗುತ್ತದೆ. ಇಂದು ಮತ್ತು ನಾಳೆ ರಸ್ತೆ ಬಂದ್ ಮಾಡಲಾಗಿರುವುದಾಗಿ ತಿಳಿದುಬಂದಿದೆ.