ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಕೋಟಿ ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಣೆ

0

ಹೈದರಾಬಾದ್ ಮೂಲದ ಮಹೇಶ್ ರೆಡ್ಡಿಯಿಂದ ಕೊಡುಗೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಫೆ.24 ರಂದು ಖ್ಯಾತ ಉದ್ಯಮಿ ಎಎಂಆರ್ ಗ್ರೂಪ್ ಹೈದರಾಬಾದ್ ಮಹೇಶ್ ರೆಡ್ಡಿ ಅವರು ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನದ ಪ್ರಭಾವಳಿಯನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಿದರು. ಅವರ ಪತ್ನಿ ರಾಧಿಕ ಸಮೇತರಾಗಿ ಸಮರ್ಪಣೆ ಮಾಡಿದರು.


ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ ರಾಮ್ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀ ವತ್ಸ ಬೆಂಗಳೂರು, ಲೋಕೇಶ್ ಮುಂಡೋಕಜೆ, ಮನೋಹರ ರೈ, ಶೋಭಾ ಗಿರಿಧರ್, ವನಜಾ ಭಟ್, ಕಾರ್ಯನಿರ್ಹಹಣಾಧಿಕಾರಿ ಡಾl ನಿಂಗಯ್ಯ‌ ಮತ್ತಿತರರು ಉಪಸ್ಥಿತರಿದ್ದರು.

ಅರ್ಚಕರು ಪೂಜಾ ವಿಧಿವಿಧಾನಗಳನ್ನು ಪೂರೈಸಿದರು. ಇದಲ್ಲದೆ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಬ್ರಹ್ಮಕಲಶೋತ್ಸವದ ದಿನವಾಗಿರುವುದರಿಂದ ದೇವಾಲಯವನ್ನು ಮಹೇಶ್ ರೆಡ್ಡಿಯವರೇ ಹೂವಿನಿಂದ ಅಲಂಕೃತಗೊಳಿಸಿದ್ದರು. ಇವರು ಈ ಹಿಂದೆ ದೇವಸ್ಥಾನಕ್ಕೆ ಪುಂಗನೂರು ತಳಿಯ ಗೋವನ್ನು ಕೊಟ್ಟಿದ್ದು ದೇವಾಲಯದ ಭೋಜನ ಶಾಲೆಗೆ ಲಕ್ಷಾಂತರ ಮೌಲ್ಯದ ಯಂತ್ರಗಳನ್ನು ನೀಡಿದ್ದರು.