ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶರೀರಕ್ರಿಯಾಶಾಸ್ತ್ರ ವಿಭಾಗದಿಂದ ಫೆ. ೨೩ ಶುಕ್ರವಾರದಂದು Southern Neurophysiology Conference-Gut Mind Balance ವೈದ್ಯಕೀಯ ಅಧಿವೇಶನ ನಡೆಯಿತು.
ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಇಂತಹ ವೈದ್ಯಕೀಯ ಅಧಿವೇಶನಗಳಲ್ಲಿ ಹೊಸ ಹೊಸ ಸಂಶೋಧನೆಗಳ ಬಗ್ಗೆ ವೈದ್ಯರು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಫ್ಯಾಕಲ್ಟ್ ಆಫ್ ಮೆಡಿಸಿನ್‌ನ ಡೀನ್ ಆಗಿದ್ದ ಡಾ. ಸಂಧ್ಯಾ ಟಿ ಅವಧಾನಿ ಅವರು ಈ ಸಮಾವೇಶದ ಮುಖ್ಯ ವಿಷಯವಾದ Gut Mind Balance ಎಂಬ ವಿಷಯಯದ ಬಗ್ಗೆ ಅವರ ಸಂಶೋಧನ ಪರಿಜ್ಞಾನವನ್ನು ಸೇರಿದ ವೈದ್ಯರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ರವರು ಅಧಿವೇಶನಕ್ಕೆ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳನ್ನು ಡಾ.ಭವ್ಯರವರು ಪರಿಚಯಿಸಿದರು.
ತಮಿಳುನಾಡಿನ ತಿರುವನ್ನಮಲೈ ಮೆಡಿಕಲ್ ಕಾಲೇಜಿನ ಶರೀರಕ್ರಿಯಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರೇಮ್‌ಬಾಲಗುರು, ಪಾಂಡಿಚೇರಿ ಮೆಡಿಕಲ್ ಕಾಲೇಜಿನ ಔಷಧ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಮಿರ್ನಾಲಿನಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ. ಅರುಣಾ ಯಡಿಯಾಲ್, ಎಜೆ ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಗ್ಯಾಸ್ಟ್ರೊ ಎಂಟರಾಲಜಿಸ್ಟ್ ಡಾ. ರಾಘವೇಂದ್ರ ಪ್ರಸಾದ ಮತ್ತು ನ್ಯೂರೋಫಿಸಿಯಾಲಜಿ ನಿಮ್ಹಾನ್ಸ್ ಬೆಂಗಳೂರಿನ ಡಾ. ಕವಿರಾಜ ಉಡುಪರವರು ಹಲವಾರು ವಿಷಯಗಳನ್ನು ವೈದ್ಯಕೀಯ ಸಮಾವೇಶದಲ್ಲಿ ಪ್ರಸ್ತುತ ಪಡಿಸಿದರು. ಈ ಸಮಾವೇಶಕ್ಕೆ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಾಗಿದ್ದರು.
ಶರೀರಕ್ರಿಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ದಾಮೋದರ ದೇವಸ್ಯರವರು ವಂದಿಸಿದರು. ವಿದ್ಯಾರ್ಥಿಗಳಾದ ಖುಷಿ ಗೌಡ ಮತ್ತು ಧ್ರುತಿ ದಂಡೂರ್ ಪ್ರಾರ್ಥಿಸಿದರು.
ಶರೀರಕ್ರಿಯಾಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ರಕ್ಷತಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ನಂತರ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳಿಂದ ಆಗಮಿಸಿದ ಹಲವಾರು ಸಂಶೋಧನಾರ್ಥಿಗಳು ತಮ್ಮ ತಮ್ಮ ವಿಷಯಗಳನ್ನು ಪ್ರಸ್ತುತ ಪಡಿಸಿದರು.