ಕೊಯನಾಡು ಮಸೀದಿಯ 26ನೇ ಸ್ವಲಾತ್ ವಾರ್ಷಿಕೋತ್ಸವದ ಬೃಹತ್ ಮಜ್ಲಿಸ್

0

ಕೊಯನಾಡು ಮಸೀದಿಯ 26ನೇ ಸ್ವಲಾತ್ ವಾರ್ಷಿಕೋತ್ಸವದ ಬೃಹತ್ ಮಜ್ಲಿಸ್ ಮಸೀದಿ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು ಅಹ್ಲ್ ಬೈತ್ ಕಣ್ಮಣಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರ್ ತಂಙಳ್ ರವರ ಭಕ್ತಿಯುತವಾದ ಪ್ರಾರ್ಥನಾ ಮಜ್ಲಿಸ್ ಗೆ ನೇತೃತ್ವ ವಹಿಸಿದ್ದರು.

ಮುಖ್ಯ ಪ್ರಭಾಷಣಕಾರರಾಗಿ ಪ್ರಭಾಷಣ ಲೋಕದ ದ್ರುವ ತಾರೆ ಜೂನಿಯರ್ ಕಬೀರ್ ಬಾಖವಿ ಅಬ್ದುಲ್ ರಝಾಕ್ ಅಬ್ರಾರಿ ಉಸ್ತಾದರೂ ಸುಮಾರು 2 ಗಂಟೆಗಳ ಕಾಲ ಬೃಹತ್ತಾದ ಪ್ರಭಾಷಣವನ್ನು ಮಾಡಿ ಸಮಾರೋಪ ದುಆ ಮಜ್ಲಿಸ್ ಗೆ ಐತಿಹಾಸಿಕವಾದ ನೇತೃತ್ವವನ್ನು ನೀಡಿದರು. ವೇದಿಕೆಯಲ್ಲಿ ಮಸೀದಿ ಖತೀಬರಾದ ಹಮೀದ್ ಅಮ್ಜದಿ, ದೇವರಕೊಲ್ಲಿ ಇಮಾಂ ಜಲೀಲ್ ಸಖಾಫಿ, ಮಸೀದಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಸಭಾಧ್ಯಕ್ಷತೆಯನ್ನು ವಹಿಸಿದರು. ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಇದರ ಅಧ್ಯಕ್ಷರಾದ ನಝೀರ್ ಮಾಡಶೇರಿ, ಸಲಹಾ ಸಮಿತಿ ಸದಸ್ಯರಾದ ಹನೀಫ್ ಎಸ್.ಪಿ, ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಎಸ್ ಪಿ, KJMRCC ಅಧ್ಯಕ್ಷರಾದ ಅಲವಿ ಕುಟ್ಟಿ, ಮೊಹಿದಿನ್ ಕುಂಞ, ಸೇವ್ ದಿ ಡ್ರೀಮ್ಸ್ ಡೈರಕ್ಟರಾದ ಜಾಬಿರ್ ನಿಝಾಮಿ, ಯುವ ಉದ್ಯಮಿಯಾದ ಹಮೀದ್ ಕುತ್ತಮೊಟ್ಟೆ, ಅಶ್ರಫ್ ಬಾಲೆಂಬಿ, ನುಸ್ರತುಲ್ ಇಸ್ಲಾಂ ಕಾರ್ಯದರ್ಶಿ ಜುಹೈಲ್ , ಗೂನಡ್ಕ, ಪೇರಡ್ಕ, ಸಂಪಾಜೆ, ಕಲ್ಲುಗುಂಡಿ, ಭಾಗದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸರ್ವ ಜಮಾಅತರು, ಊರ ಪರ ಊರ ಭಕ್ತಾದಿಗಳು ಭಾಗವಹಿಸಿದ್ದರು