ಕೊನ್ನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ನೇಮೋತ್ಸವ

0

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಕೊನ್ನಡ್ಕದಲ್ಲಿ 9ನೇ ವರ್ಷದ ನೇಮೋತ್ಸವ ಫೆ. 24, 25ರಂದು ನಡೆಯಿತು.

ಫೆ. 24ರಂದು ಬೆಳಿಗ್ಗೆ ಗಣಪತಿ ಹವನ, ಸಂಜೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ ಇವರಿಂದ ಭಜನಾ ಕಾರ್ಯಕ್ರಮ, ನಂತರ ನಾಗಬ್ರಹ್ಮರ ದರ್ಶನ, ಗುಳಿಗ ದೈವದ ನೇಮ ಬಳಿಕ ಅನ್ನಸಂತರ್ಪಣೆ, ರಾತ್ರಿ ಮೊಗೇರ್ಕಳ ದೈವದ ಗರಡಿ ಇಳಿಯುವುದು, ತನ್ನಿ ಮಾಣಿಗ ಗರಡಿ ಇಳಿಯುವುದು, ಬೆಳಿಗ್ಗೆ ಮೊಗೇರ್ಕಳ ದೈವದ ಹರಿಕೆ ಸೇವೆ, ಹಾಲು ಕುಡಿಯುವುದು, ತರವಾಡು ಮನೆಗೆ ಹೋಗುವುದು ನಡೆಯಿತು.

ಫೆ. 25ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮ, ಗಂಧ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.