ವಿದ್ಯಾಬೋಧಿನಿ ಪ್ರೌಡ ಶಾಲೆ ಬಾಳಿಲದಲ್ಲಿ ಪ್ರೇರಣಾ – ಶೈಕ್ಷಣಿಕ ಸರಣಿ ತರಬೇತಿ ಕಾರ್ಯಕ್ರಮ

0

ಜೇಸಿಐ ಪಂಜ ಪಂಚಶ್ರೀ ಇದರ ಆಶ್ರಯದಲ್ಲಿ
ಫೆ.24 ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಡ ಶಾಲೆಯಲ್ಲಿ “ಪ್ರೇರಣಾ” ಶೈಕ್ಷಣಿಕ ಸರಣಿ ತರಬೇತಿ ಕಾರ್ಯಕ್ರಮದ ನಡೆಯಿತು.

ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಜೇಸಿ ಜೀವನ್ ಮಲ್ಕಜೆ ವಹಿಸಿದ್ದರು. ವಲಯ ತರಬೇತುದಾರರಾದ ಜೇಸಿ ಸೋಮಶೇಖರ ನೇರಳ , ಶಾಲಾ ಮುಖ್ಯೋಪಾಧ್ಯಯ ಯಶೋಧರ ನಾರಾಲ ,ಘಟಕದ ಕಾರ್ಯದರ್ಶಿ ಜೇಸಿ ಜೀವನ್ ಶೆಟ್ಟಿಗದ್ದೆ, ಕಾರ್ಯಕ್ರಮ ನಿರ್ದೇಶಕರಾದ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೇಸಿ ನಾಗ್ಮಣಿ ಕೆದಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ವಲಯ ತರಬೇತುದಾರರಾದ ಜೇಸಿ ಸೋಮಶೇಖರ ನೇರಳ ತರಬೇತಿ ನಡೆಸಿಕೊಟ್ಟರು.