ಫೆ.28 ರಿಂದ ಎಡಮಂಗಲದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಕ್ಯುಪ್ರೆಶರ್ ಚಿಕಿತ್ಸೆ

0

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಎಡಮಂಗಲ, ಹಾಲು ಉತ್ಪಾದಕರ ಸಹಕಾರಿ ಸಂಘ ಎಡಮಂಗಲ ಮತ್ತು ಗ್ರಾಮ ಪಂಚಾಯತ್ ಎಡಮಂಗಲ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಫೆ.28ರಿಂದ ಮಾ. 05 ರ ವರೆಗೆ ಅಕ್ಯುಪ್ರೆಶರ್ ಚಿಕಿತ್ಸೆ ನಡೆಯಲಿದೆ.

ಶಿವಮೊಗ್ಗದ ಚಂದನ್. ಜಿ. ಮತ್ತು ಮಂಜುನಾಥ್. ಎನ್.ರವರು ಚಿಕಿತ್ಸೆ ನೀಡಲಿದ್ದಾರೆ.

ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು, ಕೈಕಾಲು ಸೆಳೆತ,ಹಿಮ್ಮಡಿ ನೋವು, ಮಲಬದ್ಧತೆ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಕೊಲೆಸ್ಟ್ರಾಲ್, ದೇಹದ ಅತಿಭಾರ, ಸ್ತ್ರೀಯರ ಸಮಸ್ಯೆಗಳು, ಜೀರ್ಣ ಸಮಸ್ಯೆ, ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ.

ಆರೋಗ್ಯವಂತರು ಕೂಡಾ ದೇಹ ಪುನಶ್ಚೇತನಕ್ಕಾಗಿ ಅಕ್ಯುಪ್ರೆಶರ್ ಚಿಕಿತ್ಸೆ ಪಡೆದುಕೊಳ್ಳಬಹುದು.