ಆಲೆಟ್ಟಿ ಗ್ರಾಮ ಪಂಚಾಯತ್ ನಿಂದ ವಿಕಲ ಚೇತನರಿಗೆ ಮೀಸಲಿರಿಸಿದ ಅನುದಾನದಲ್ಲಿ ಮಂಚ ವಿತರಣೆ

0

ಗ್ರಾಮ ಪಂಚಾಯತಿನ ಶೇಕಡಾ 5% ರ ಅನುದಾನವು ವಿಕಲ ಚೇತನರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದಡಿಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತಿನ 2 ನೇ ಮತ್ತು 5 ನೆ ವಾರ್ಡಿನ ಪಂಚಾಯತ್ ಸದಸ್ಯರ ಶಿಫಾರಸ್ಸಿನ ಮೇರೆಗೆ 2ನೇ ವಾರ್ಡಿನ ಪೈ0ಬೆಚ್ಚಾಲು ಪರಿಶಿಷ್ಟ ಜಾತಿ ಕಾಲೋನಿಯ ಯಕ್ಷಿತ್ ಹಾಗೂ 5ನೇ ವಾರ್ಡಿನ ಕೆಳಗಿನ ಆಲೆಟ್ಟಿಯ ಗುಬ್ಬಿ ಎಂಬ ಫಲಾನುಭವಿಯವರಿಗೆ ಆಲೆಟ್ಟಿ ಗ್ರಾಮ ಪಂಚಾಯತಿನಿಂದ ಮಂಚ ವಿತರಣೆಯನ್ನು ಮಾಡಲಾಯಿತು. ಈ ಸಂದರ್ಬದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ್, ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಕೊಲ್ಛಾರು, ಧರ್ಮಪಾಲ ಕೊಯ0ಗಾಜೆ, ಪಂಚಾಯತ್ ಸಿಬ್ಬಂದಿ ಸೀತಾರಾಮರವರು ಉಪಸ್ಥಿತರಿದ್ದರು.