ಸಂಪಾಜೆ ಸಹಕಾರಿ ಸಂಘದಿಂದ ಮರಣನಿಧಿ ಹಸ್ತಾಂತರ

0

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ , ಇತ್ತೀಚೆಗೆ ಮೃತಪಟ್ಟ ಖತೀಜಮ್ಮ ರವರ ಮನೆಗೆ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ತೆರಳಿ ಸಂಘದ ವತಿಯಿಂದ ನೀಡಲ್ಪಡುವ ಮರಣ ನಿಧಿ ರೂಪಾಯಿ ಹದಿನೈದು ಸಾವಿರವನ್ನು ಅವರ ಮನೆಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಸಿಬ್ಬಂದಿಯಾದ ಧನಂಜಯ ಎಂ. ಪಿ. ರವರು ಹಾಜರಿದ್ದರು.