ಭಜನಾ ಸಂಕೀರ್ತನೆ ಯೊಂದಿಗೆ ಸಮಾಪನಗೊಂಡ ರಾಮ ಮಂದಿರದ ಬ್ರಹ್ಮಕಲಶೋತ್ಸವ

0

ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವವು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿ ಫೆ.28 ರಂದು ಭಜನೆಯ ಮೂಲಕ ಸಮಾಪ್ತಿ ಯಾಯಿತು.


ಭಜನಾ ಸಂಕೀರ್ತನೆ
ಸೂರ್ಯೋದಯದಿಂದ ಮೊದಲ್ಗೊಂಡು ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನಿರಂತರವಾಗಿ ಸೂರ್ಯಾಸ್ತದವರೆಗೆ ಜರುಗಿತು. ಸಂಧ್ಯಾ ಕಾಲದಲ್ಲಿ ರಾಮ ಮಂದಿರದ ಭಜಕರಿಂದ ಮಂಗಳಾಚರಣೆಯೊಂದಿಗೆ ದೀಪ ವಿಸರ್ಜನೆಯಾಗಿ ಬ್ರಹ್ಮಕಲಶೋತ್ಸವವು ಸಮಾಪನಗೊಂಡಿತು. ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ಭಕ್ತಾದಿಗಳು ಪಾಲ್ಗೊಂಡಿದ್ದರು.