ಕೆ ವಿ ಜಿ ಪಾಲಿಟೆಕ್ನಿಕ್: ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಸೋಸಿಯೇಷನ್ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ

0

ಸುಳ್ಯದ ಕುರಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನ ಇ&ಇ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಸಂಘ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಸೋಸಿಯೇಷನ್ ನ 2023- 24 ನೇ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ವಿವೆಕ್ ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ, ವಿದ್ಯಾರ್ಥಿ ಆಪ್ತ ಸಮಾಲೋಚಕ ರಂಗಸ್ವಾಮಿ , ಇಲೆಕ್ಟ್ರಿಕಲ್ ಅಸೋಸಿಯೇಷನ್ ಸಲಹೆಗಾರ ಮಹೇಶ್ ಗೊರವರ್, ಸಂಘದ ಅಧ್ಯಕ್ಷ ನಮ್ರತ್ ಮತ್ತು ಕಾರ್ಯದರ್ಶಿ ವಿಕಾಸ್ ಉಪಸ್ಥಿತರಿದ್ದರು. ಕು.ಸ್ರಷ್ಟಿ ಸ್ವಾಗತಿಸಿ ಚೇತನ್ ವಂದಿಸಿದರು. ರೋಕ್ಷನ್ ಕಾರ್ಯಕ್ರಮ ನಿರೂಪಿಸಿದರು.