ಮಾ.25 – ಎ.10: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ

0

ದೈವಗಳ ಬೆಳ್ಳಾಟ – ಕೋಲ – ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮ

ಎ.1ರಂದು ಶ್ರೀ ಭಗವತಿ ದೊಡ್ಡಮುಡಿ

ಕೊಡಗಿನ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಮಾ.25ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದರ ಮೂಲಕ ಪ್ರಾರಂಭಗೊಳ್ಳಲಿದ್ದು, ಎ.1ರಂದು ಇತಿಹಾಸ ಪ್ರಸಿದ್ಧ ಶ್ರೀ ಭಗವತಿ ದೊಡ್ಡಮುಡಿ ಜರುಗಲಿದ್ದು, ಜಾತ್ರೋತ್ಸವವು ಎ.10ರವರೆಗೆ ಜರುಗಲಿದೆ‌.

ಮಾ.26ರಂದು ಬೆಳಿಗ್ಗೆ ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ, ಸಾಯಂಕಾಲ ಶ್ರೀ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರುವುದು. ಸಾಯಂಕಾಲ ಮುಖ ತೋರಣ ಏರಿಸುವುದು., ಶಿಸ್ತು ಅಳೆಯುವುದು. ರಾತ್ರಿ ದೇವರ ಶ್ರೀ ಭೂತಬಲಿ, ದೇವರ ನೃತ್ಯಬಲಿ, ನಂತರ ಕಟ್ಟೆಪೂಜೆ ಜರುಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವರ ನೃತ್ಯ ಬಲಿಯಂದು ಅಡೂರು ಪಾಂಡಿಯವರಿಂದ ವಿಶೇಷ ಆಕರ್ಷಣೆ ಚಿಲಂಗ ಕಲಾಸಮಿತಿ ಚೆಂಡೆಮೇಳ ನಡೆಯಲಿದೆ.

ಮಾ‌.27ರಂದು ಬೆಳಿಗ್ಗೆ ದೇವರ ದರ್ಶನಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ತುಳು ಕೋಲದ ಬೆಳ್ಳಾಟ ಎರಡು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳುಕೋಲ ತಿರುವಪ್ಪಗಳು ಎರಡು ಜರುಗಲಿದೆ.

ಮಾ.28ರಂದು ಮಧ್ಯಾಹ್ನ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ಎರಡರ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ಜರುಗಲಿದೆ.

ಮಾ.29ರಂದು ಮಧ್ಯಾಹ್ನ ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ ಪಳ್ಳಿಯಾರ ಬಾಗಿಲು ತೆರೆಯುವುದು, ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳು, ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು ಎರಡು ಮತ್ತು ಅವುಗಳ ಎರಡು ತಿರುವಪ್ಪಗಳು ಜರುಗಲಿದೆ.

ಮಾ.30ರಂದು ಬೆಳಿಗ್ಗೆ ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ ಎರಡು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲಗಳ ಎರಡು ತಿರುವಪ್ಪಗಳು ಜರುಗಲಿದೆ.

ಮಾ.31ರಂದು ಬೆಳಿಗ್ಗೆ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ ಭಗವತಿ ದೇವಿ ಸಮಾರಾಧನೆ, ಪುಲ್ಲೂರ್ ಕಣ್ಣನ್ ಒಂದು ಬೆಳ್ಳಾಟ, ತುಳು ಕೋಲಗಳ ಬೆಳ್ಳಾಟ, ಮಲೆಕಾರಿ ಬೆಳ್ಳಾಟ, ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್, ರಕ್ತೇಶ್ವರಿ ದೈವದ ತೊಡಂಙಲ್, ಪೊಟ್ಟನ್ ದೈವದ ತೊಡಂಙಲ್, ಬೇಟೆ ಕರಿಮಗನ್ ಬೆಳ್ಳಾಟ, ಭಗವತಿ ಕಲಶ ಬರುವುದು ಮತ್ತು ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರುಕಾಳಿ ತೋಟ್ಟಂ, ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು ನಡೆಯಲಿದೆ

ಎ.1ರಂದು ಬೆಳಿಗ್ಗೆ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರುಕಾಳಿ, ಪುಲ್ಲೂರುಕಣ್ಣನ್, ವಿಷ್ಣುಮೂರ್ತಿ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದ್ದು, ಅಪರಾಹ್ನ ಶ್ರೀ ಭಗವತಿ ದೊಡ್ಡಮುಡಿ, ರಾತ್ರಿ ಪಯ್ಯೋಳಿ ನಡೆಯಲಿದೆ.

ಎ.2ರಂದು ರಾತ್ರಿ ವಾಲಸಿರಿ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಎ.3ರಂದು ಮಧ್ಯಾಹ್ನ ಮಹಾಪೂಜೆ, ಸಂಜೆ ದೇವಳದಿಂದ ಉಳ್ಳಾಗುಳ ಭಂಡಾರ ಹೊರಟು ಮಂಟಮೆಯಲ್ಲಿ ಹಿರಿಯರ ನೇಮಕ್ಕೆ ಮುಡಿಯಾಗಿ ಮಾಡದಲ್ಲಿ ನೇಮ ನಂತರ ಸೋಮಕೊಟ್ಯಕ್ಕೆ ತೆರಳಿ ತಂಬಿಲ, ಫಲಹಾರವಾಗಿ ಪುನ: ತಂಬಿಲ, ಮಾಡಕ್ಕೆ ಹಿಂತಿರುಗಿ ಕಿರಿಯರ ನೇಮ, ಮತ್ತು ರುದ್ರಚಾಮುಂಡಿ ಆಗಿ ಭಂಡಾರ ದೇವಳಕ್ಕೆ ಬಂದು ಕಟ್ಟಾಜ್ಞೆಯಿಂದ ಭಂಡಾರವನ್ನು ಸ್ವಸ್ಥಾನದಲ್ಲಿರಿಸಲಾಗುವುದು.

ಎ.4ರಂದು ಸಂಜೆ ಶ್ರೀ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ಕೋಲ ಹಾಗೂ ಕೊರಗತನಿಯ ದೈವದ ಕೋಲ ನಡೆಯಲಿದೆ.

ಎ.5ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ರಾತ್ರಿ ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಪೆರಾಜೆ ಶ್ರೀ ಶಾಸ್ತಾವು ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ರತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಎ.6ರಂದು ರಾತ್ರಿ ಶ್ರೀ ಕರಿಭೂತ ಕೋಮಾಳಿ ದೈವಗಳ ಹರಿಕೆ ಕೋಲಗಳು ನಡೆಯಲಿದೆ. ಎ.7ರಂದು ರಾತ್ರಿ ಗುಳಿಗ ದೈವದ ಕೋಲ ಜರುಗಲಿದೆ

ಎ.9ರಂದು ಬೆಳಿಗ್ಗೆ ಕ್ರೀಡಾ ಕಾರ್ಯಕ್ರಮದ ಅಂಗವಾಗಿ ಪೆರಾಜೆಯ ಯುವಶಕ್ತಿ ಕ್ರೀಡಾಕಲಾ ಹವ್ಯಾಸಿ ಸಂಘದ ಪ್ರಾಯೋಜಕತ್ವದಲ್ಲಿ ಕಬಡ್ಡಿ ಪಂದ್ಯಾಟ ಜರುಗಲಿದ್ದು, ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಭಂಡಾರ ತೆಗೆದು, ಬಳಿಕ ಕೂಡುವುದು, ಮೇಲೇರಿ ಕುಳ್ಚಾಳ ನಡೆಯಲಿದೆ.

ಎ.10ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ, ರುದ್ರಚಾಮುಂಡಿ ದೈವದ ಕೋಲ, ಪ್ರಸಾದ ವಿತರಣೆ, ಮಾರಿಕಳದೊಂದಿಗೆ ಕಾಲಾವಧಿ ಜಾತ್ರೋತ್ಸವವು ಸಂಪನ್ನಗೊಳ್ಳಲಿದೆ.