ಬೆಳ್ಳಾರೆಯ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಏ. 7-8ರಂದು ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದ್ದು, ಗೊನೆ ಮುಹೂರ್ತವು ಮುಖ್ಯ ಕರ್ಮಿ ಲೋಕೇಶ್ ಪಾಲ್ತಾಡು ಇವರ ನೇತೃತ್ವದಲ್ಲಿ ಮಾರ್ಚ್ 31 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.















\ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ, ಕಾರ್ಯದರ್ಶಿ ಪದ್ಮನಾಭ ಚೂಂತಾರು, ಕೋಶಾಧಿಕಾರಿ ಆನಂದ ಗೌಡ ಪಡ್ಪು, ಸಮಿತಿಯ ಪೂರ್ವಾಧ್ಯಕ್ಷರಾದ ಕೊರಗಪ್ಪ ಕುರಂಬುಡೇಲು, ನರೇಶ್ ರೈ ಅಜಪಿಲ, ತನುರಾಜ್ ಚಿಮುಳ್ಳು, ರನೀಶ್ ಅಜಪಿಲ ಸೇರಿದಂತೆ ಊರ, ಪರವೂರಿನ ಭಕ್ತಾದಿಗಳು ಉಪಸ್ಥಿತರಿದ್ದರು.









