ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

0

ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ PODAC boot camp pvt. Ltd. ರವರ ನೇತೃತ್ವದಲ್ಲಿ ಎ. 1ರಿಂದ ಏ 6ರ ತನಕ ಸಾಹಸಮಯ ಬೇಸಿಗೆ ಶಿಬಿರ ನಡೆಯುತ್ತಿದ್ದು, ಶಿಬಿರದ ಉದ್ಘಾಟನೆ ಎ. 1ರಂದು ನಡೆಯಿತು. ಶಿಬಿರದಲ್ಲಿ ಬಿಲ್ಲುಗಾರಿಕೆ, ವಿಶಿಷ್ಟ ಅಡೆ-ತಡೆ ಆಟ, ಕಸರತ್ತು, ಟೆಂಟ್ ತಯಾರಿ, ಹೊರಾಂಗಣ ಕ್ಯಾಂಪ್, ಬೂಟ್ ಕ್ಯಾಂಪ್ ಗಳೊಂದಿಗೆ ವಿಶಿಷ್ಟ ರೀತಿಯ ತರಬೇತಿಯನ್ನು ನೀಡಲಾಗುತ್ತಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳು ಮಾನಸಿಕ ದೃಢತೆ, ಏಕಾಗ್ರತೆ ಹಾಗೂ ದೈಹಿಕ ಸ್ಥೈರ್ಯ, ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು ಅವಕಾಶವಿದೆ. ಶಿಬಿರಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಸಂಸ್ಥೆಯ ಸಂಚಾಲಕರು ತಿಳಿಸಿದ್ದಾರೆ.