ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಾರ್ಷಿಕ ಆದಾಯ 146 ಕೋಟಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 146 ಕೋಟಿ ಎಂದು ತಿಳಿದುಬಂದಿದೆ.

ಕಳೆದ ಸಾಲಿನಲ್ಲಿ 123 ಕೋಟಿ ಆದಾಯ ಲಭಿಸಿದ್ದು ಪ್ರಸಕ್ತ ಸಾಲಿನಲ್ಲಿ ಕಳೆದ ಸಾಲಿಗಿಂತ 23 ಕೋಟಿ ಹೆಚ್ಚು ಲಭಿಸಿರುವುದಾಗಿ ವರದಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಅತಿ ಶ್ರೀಮಂತ ದೇವಾಲಯ ಎಂಬ ಪ್ರಸಿದ್ದಿಯನ್ನು ಉಳಿಸಿಕೊಂಡಿದೆ‌. ಸರ್ಪ ಸಂಸ್ಕಾರ, ವಸತಿ ಗೃಹ, ಪೂಜಾ ಸೇವೆ ಮತ್ಯಾಧಿ ಆದಾಯ ಗಳಿಂದ ಒಟ್ಟಾಗಿ 146.01 ಕೋಟಿ ಆದಾಯ ಬಂದಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಭಕ್ತರು ಹೆಚ್ಚಾಗಿ ದೇವಾಲಯಕ್ಕೆ ಆಗಮಿಸಿದ ಕಾರಣ ಆದಾಯ ಹೆಚ್ಚಳು ಕಾರಣ ಎನ್ನಲಾಗಿದೆ.