ಸುಳ್ಯ ಸಿ ಎ ಬ್ಯಾಂಕ್ ಬಳಿ ಮೃತಪಟ್ಟ ವ್ಯಕ್ತಿಯ ವಾರಿಸುದಾರರು ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ

0

ಸುಳ್ಯ ಸಿ ಎ ಬ್ಯಾಂಕ್ ಬಳಿ ಏಪ್ರಿಲ್ 8 ರಂದು ಮೃತಪಟ್ಟ ಅಪರಿಚಿತ ವ್ಯಕ್ತಿಯ ವಾರಿಸುದಾರರು ಯಾರಾದರೂ ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಮೃತ ದೇಹವನ್ನು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ.

ಮೃತ ವ್ಯಕ್ತಿ ಸುಮಾರು 40 ವರ್ಷ ಪ್ರಾಯವಿದ್ದು ವ್ಯಕ್ತಿಯ ಕೈಯಲ್ಲಿ ಶಿವಕುಮಾರ,ಮತ್ತೊಂದು ಕೈಯಲ್ಲಿ ಇಂಗ್ಲಿಷ್ ಅಕ್ಷರದಲ್ಲಿ ರೇಣು ಎಂದು ಹಚ್ಚೆ ಬರೆಸಿಕೊಂಡಿದ್ದಾರೆ. ಎದೆಯ ಬಲಭಾಗದಲ್ಲಿ ಆಂಜನೇಯನ ಟ್ಯಾಟೂ ಇರುವುದು ಕಂಡು ಬಂದಿದೆ.ಬಿಳಿ ಬಣ್ಣದ ಎತ್ತರದ ಆಕಾರದಲ್ಲಿರುವ ಈ ವ್ಯಕ್ತಿಯ ಸಂಬಂಧಿಕರು ಪರಿಚಯಸ್ತರು ಯಾರಾದರೂ ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸುಳ್ಯ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.