ಎ.17 ರಂದು ಸುಳ್ಯ ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ರ ಅಧಿಕೃತ ಭೇಟಿ

0


ರೋಟರಿ ಜಿಲ್ಲೆ ೩೧೮೧ ರ ಜಿಲ್ಲಾ ಗವರ್ನರ್ ರೊ. ಮೇಜರ್ ಡೋನರ್ ಹೆಚ್.ಆರ್.ಕೇಶವ ಅವರು ಎ.೧೭ರಂದು ಸುಳ್ಯ ಕ್ಲಬ್‌ಗೆ ಭೇಟಿ ನೀಡಲಿದ್ದು, ಬೆಳಿಗ್ಗೆ ಚೆನ್ನಕೇಶವ ದೇವರ ದರ್ಶನ ಪಡೆದ ಬಳಿಕ ರೋಟರಿ ಕ್ಲಬ್ ನಿಂದ ದೇವಸ್ಥಾನದ ಸಂಪರ್ಕ ರಸ್ತೆಗೆ ಕೊಡಮಾಡಿದ ಇಂಟರ್ಲಾಕ್ ಯೋಜನೆ ಯನ್ನು ವೀಕ್ಷಿಸಲಿದ್ದಾರೆ.

ಬಳಿಕ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮಿತ್ತಡ್ಕ ಇಲ್ಲಿ ರೋಟರಿ ಜಿಲ್ಲಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಮಳೆ ನೀರು ಕೊಯ್ಲು ಯೋಜನೆಯ ಘಟಕದ ಉದ್ಘಾಟನೆ, ರೋಟರಿ ಹಿರಿಯ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರೋಟರಿ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ರೊ. ರಾಮಚಂದ್ರ ಪೆರಿಯಡ್ಕ, ಹಿರಿಯ ವಿದ್ಯಾರ್ಥಿಗಳಾದ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಪ್ರಧಾನ ಕಾರ್ಯದರ್ಶಿ, ಎ ಓ ಎಲ್ ಇ ಸುಳ್ಯ, ಡಾ ಗಣೇಶ್ ಎಂ ಕೆ ಪ್ರಾಧ್ಯಪಕರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮಂಗಳೂರು ಮತ್ತು ಡಾ ತಾರಾ ರೋಶನ್ ಪ್ರಾಧ್ಯಾಪಕರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇವರು ಭಾಗವಹಿಸಲಿದ್ದಾರೆ.

ಸಾಯಂಕಾಲ ರೋಟರಿ ಶಾಲಾ ಸಭಾಂಗಣ ರಥ ಬೀದಿಯಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ರೋಟರಿ ಜಿಲ್ಲಾ ಯೋಜನೆಯಡಿ ಅಂಗನವಾಡಿ ಶಾಲೆಗಳಿಗೆ ಕೊಡುಗೆ, ರಂಗಮಾಂತ್ರಿಕ ಜೀವನ್ ರಾಮ್ ಸುಳ್ಯ ಇವರಿಗೆ ರೋಟರಿ ಪ್ರಶಸ್ತಿ ಪ್ರಧಾನ ಹಾಗೂ ಸಾಧಕರನ್ನು ಗುರುತಿಸುವ ಕಾರ್ಯಕ್ರಮ ಇರುತ್ತದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ರವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.