ಅರಂತೋಡು: ಬಾಜಿನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಸೇವಾ ಸಮಿತಿ ರಚನೆ

0

ಅರಂತೋಡು ಗ್ರಾಮದ ಬಾಜಿನಡ್ಕದ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಟ್ರಸ್ಟಿನ ಜಂಟಿ ಕಮಿಟಿಯ ಮಹಾಸಭೆಯು ಎ. 15ರಂದು ದೈವಸ್ಥಾನದ ಚಾವಡಿ ವಠಾರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಅಧ್ಯಕ್ಷ ವಸಂತ ಬಿ. ಬಾಜಿನಡ್ಕ ವಹಿಸಿದ್ದರು.

ಈ ಸಂದರ್ಭದಲ್ಲಿ 2023-24 ನೇ ಸಾಲಿನ ನೂತನ ಸೇವಾ ಸಮಿತಿ ರಚನೆ ಮಾಡಲಾಯಿತು.
ಟ್ರಸ್ಟ್ ಕಮಿಟಿಯ ನೂತನ ಗೌರವಾಧ್ಯಕ್ಷರಾಗಿ ಶಂಕರನಾರಾಯಣ ಕೆ. ಕಟ್ಟಕೋಡಿ, ಅಧ್ಯಕ್ಷರಾಗಿ ಮನ್ಸ ಮುಗೇರ ಅಡ್ಕಬಳೆ, ಉಪಾಧ್ಯಕ್ಷರಾಗಿ ವಸಂತ ಬಿ. ಬಾಜಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಕುಸುಮಾದರ ಬಿ ಎಂ ಬಾಜಿನಡ್ಕ, ಜೊತೆ ಕಾರ್ಯದರ್ಶಿಯಾಗಿ ಶಂಕರ ಬಿ. ಬಾಜಿನಡ್ಕ, ಕೋಶಾಧಿಕಾರಿಯಾಗಿ ಮೋಹನ್ ಕುಮಾರ್ ಅಡ್ಕಬಳೆ, ಸದಸ್ಯರಾಗಿ ಚಾಕಾರು ಕೆ. ಕಟ್ಟಕೋಡಿ, ವಾಸುದೇವ ಅಡ್ಕಬಳೆ, ಬೋಜ ಬಿ. ಬಾಜಿನಡ್ಕ ಸುಂದರ ಬಿ. ಬಾಜಿನಡ್ಕ, ತಿಮ್ಮಪ್ಪ ಬಿ. ಬಾಜಿನಡ್ಕ , ಸತೀಶ ಬಿ. ಬಾಜಿನಡ್ಕ , ರೋಹಿತ್ ಬಿ. ಬಾಜಿನಡ್ಕ ಆಯ್ಕೆಯಾದರು.