ಬಲ್ನಾಡುಪೇಟೆಯ ಶ್ರೀ ಆದೀಶ್ವರ ಸ್ವಾಮಿಗೆ ಪ್ರತಿಷ್ಠಾ ವಾರ್ಷಿಕೋತ್ಸವ

0

ಮರ್ಕಂಜದ ಬಲ್ನಾಡುಪೇಟೆ 1008 ಆದೀಶ್ವರ ಬಸದಿಯಲ್ಲಿ ವಿಜ್ರಂಭಣೆಯಿಂದ ನಡೆದ 10ನೇ ವಾರ್ಷಿಕೋತ್ಸವದ ಸಂಭ್ರಮ

ಮರ್ಕಂಜ ಗ್ರಾಮದ ಬಲ್ನಾಡು ಪೇಟೆ ಭಗವಾನ್ 1008 ಶ್ರೀ ಆದೀಶ್ವರ ಸ್ವಾಮಿ ಬಸದಿಯ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಧಾಮ ಸಂಪ್ರೋಕ್ಷಣೆ ಹಾಗೂ ಪ್ರತಿಷ್ಠಾ ಮಹೋತ್ಸವ ಕಾರ್ಕಳ ಜೈನಮಠದ ರಾಜಗುರು ಭಟ್ಟಾರಕ ಲಲಿತ ಕೀರ್ತಿ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಉಪಸ್ಥಿತಿ ಯಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಮೇ.11ರಂದು ಬೆಳಿಗ್ಗೆ ತೋರಣ ಮುಹೂರ್ತ, ಬಳಿಕ ವಿಮಾನ ಶುದ್ಧಿ, ಪಂಚಾಮೃತ ಅಭಿಷೇಕ, ಶ್ರೀ ಆದಿನಾಥ ಸ್ವಾಮಿಗೆ 108 ಕಲಶ ಅಭಿಷೇಕ, ಮೇಗಿನನೆಲೆ ಪಾಶ್ವ ೯ ನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಶ್ರೀ ಆದೀಶ್ವರ ಸ್ವಾಮಿ ಉತ್ಸವ, ಮಹಾಪೂಜೆ, ಶ್ರೀ ಪದ್ಮಾವತಿ ಅಮ್ಮನವರಿಗೆ ಅಲಂಕಾರ ಪೂಜೆ, ಪ್ರಸಾದ ವಿತರಣೆ, ಸಂಘ-ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಜೈನ ಬಾಂಧವರು ಉಪಸ್ಥಿತರಿದ್ದು, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.