ಕೆ.ವಿ.ಜಿ. ಅಲೈಡ್ ಹೆಲ್ತ್ ಸೈನ್ಸ್ ಮತ್ತು ಫಿಜಿಯೋಥೆರಫಿ ಸಂಸ್ಥೆಯ ಪದವಿ ಪ್ರದಾನ ಸಮಾರಂಭ

0

ಗುರಿ ಸಾಧಿಸುವಲ್ಲಿ ವಿಫಲರಾದರೆ ಹಿಂಜರಿಯದೆ ಮುನ್ನುಗ್ಗಿದರೆ ಸಫಲ ಸಾಧ್ಯ – ಡಾ. ನಾಗಲಕ್ಷ್ಮಿ ಚೌದರಿ

ನಾವು ಸ್ಪಷ್ಟವಾದ ಗುರಿಯೆಡಗೆ ಸಾಗಬೇಕು. ಸಾಧನೆಯ ಹಾದಿಯಲ್ಲಿ ಸೋಲು ಸಹಜ. ಸೋತರೆ ಅದು ಜೀವನಕ್ಕೆ ಪಾಠವಾಗುತ್ತದೆ. ಮತ್ತೆ ಶ್ರಮವಹಿಸಿ ಮುನ್ನುಗಿದ್ದರೆ ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯ. ಈಗಿನ ಕಾಲದಲ್ಲಿ ಸೈಬರ್ ಕ್ರೈ ಹೆಚ್ಚಾಗುತ್ತಿದ್ದು, ವೈಯಕ್ತಿಕ ವಿಚಾರಗಳನ್ನು ತಮ್ಮವರೆಂದು ನಂಬಿ ಹಂಚಿಕೊಳ್ಳಬೇಡಿ. ಅವರು ಇವತ್ತು ನಮ್ಮ ಸ್ನೇಹಿತರಾದರೆ ಮುಂದೊಂದು ದಿನ ವೈರಿಯಾಗಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ. ಮಾನವೀಯತೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ರಾಜ್ಯ ಮಹಿಳಾ‌ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹೇಳಿದರು.

ಅವರು ಮೇ. 18ರಂದು‌ ಕೆವಿಜಿ ಮೆಡಿಕಲ್ ಕಾಲೇಜು ಆಡಿಟೋರಿಯಂನಲ್ಲಿ ನಡೆದ ಕೆ.ವಿ.ಜಿ. ಅಲೈಡ್ ಹೆಲ್ತ್ ಸೈನ್ಸ್ ಮತ್ತು ಫಿಜಿಯೋಥೆರಫಿ ಸಂಸ್ಥೆಯ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪದವಿ ಪಡೆದ ವಿದ್ಯಾರ್ಥಿಗಳು ಮುಂದೆ ಸೇವೆ ಸಲ್ಲಿಸುವಾಗ ಮಾನವೀಯತೆಯನ್ನು ಮೆರೆಯಿರಿ. ಧನಾತ್ಮಕ ಚಿಂತನೆಗಳನ್ನು ಮಾಡಿ. ಸಮಾಜಕ್ಕೆ ಮಾದರಿಯಾಗಿ ಸೇವೆ ಸಲ್ಲಿಸುವುದರ ಮೂಲಕ ನಿಮ್ಮ ಪೋಷಕರ, ನಮ್ಮ ಸಂಸ್ಥೆಯ ಕನಸ್ಸನ್ನು‌ ನನಸಾಗಿಸಿ ಎಂದರು.

ಎ.ಒ.ಎಲ್.ಇ ಉಪಾಧ್ಯಕ್ಷೆ ಶ್ರೀಮತಿ ಶೋಭ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕೋಶಾಧಿಕಾರಿ ಡಾ. ಗೌತಮ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆವಿಜಿ ಮೆಡಿಕಲ್ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಉದ್ಘಾಟನಾ ಮಾತುಗಳನ್ನಾಡಿದರು. ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ ರಾಮಚಂದ್ರ ಭಟ್ ಪ್ರಮಾಣವಚನ ಬೋಧಿಸಿದರು. ಪೆಥಾಲಜಿ ವಿಭಾಗದ ಪ್ರೊಫೆಸರ್ ಡಾ. ನವ್ಯ ಬಿಎಂ. ರ್ಯಾಂಕ್ ಪಡೆದವರ ಹೆಸರು ವಾಚಿಸಿದರು.

ಕೆವಿಜಿ ಮೆಡಿಕಲ್ ಕಾಲೇಜಿನ ಬಯೋಕೆಮೆಸ್ಟ್ರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಶೃತಿ ರೈ ಮುಖ್ಯ ಅತಿಥಿ ಡಾ. ನಾಗಲಕ್ಷ್ಮಿ ಚೌದರಿಯವರನ್ನು ಪರಿಚಯಿಸಿದರು. ಎ.ಒ.ಎಲ್.ಇ. ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ ಸ್ವಾಗತಿಸಿ,


ಫಿಸಿಯೋಥೆರಪಿ ವಿಭಾಗದ ಪ್ರಾಂಶುಪಾಲ ಡಾ. ಸಾಯಿರಾಂ ವಂದಿಸಿದರು. ಫಿಸಿಯೋಥೆರಫಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಶಾಶ್ವತಿ ಮತ್ತು ಪೆತಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್‌ ಡಾ. ಅಂಜಲಿ ರಾವ್ ಕಾರ್ಯಕ್ರಮ ನಿರೂಪಿಸಿದರು.