ಪಂಜ:ಲಯನ್ಸ್ ಕ್ಲಬ್ ವತಿಯಿಂದ ಹೆಲೆನ್ ಕೆಲೆರ್ಸ್ ದಿನಾಚರಣೆ ,ಹಾಗೂ ಕುಟುಂಬ ಸಮ್ಮಿಲನ

0

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಮೇ.16.ರಂದು ಲ | ನಾಗೇಶ್ ಕಿನ್ನಿಕುಮೇರಿ ಮನೆಯಲ್ಲಿ ಹೆಲೆನ್ ಕೆಲೆರ್ಸ್ ದಿನಾಚರಣೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು.‌‌ಸಭಾಧ್ಯಕ್ಷತೆಯನ್ನ ಲ |ದಿಲೀಪ್ ಬಾಬ್ಲು ಬೆಟ್ಟು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಜಿಲ್ಲಾ ಜಿಎಂಟಿ ಸಂಯೋಜಕರಾದ ಲ |ಜಯರಾಮ ದೇರಪಜ್ಜನ ಮನೆ ಭಾಗವಹಿಸಿ ಹೆಲೆನ್ ಕೆಲೆರ್ಸ್ ರವರ ಜೀವನ ಚರಿತ್ರೆ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿ ನಮ್ಮ ಕ್ಲಬ್ ಪೂರ್ವಾಧ್ಯಕ್ಷ ಲl ಬಾಲಕೃಷ್ಣ ಗೌಡ ಮೂಲೆಮನೆ ಕುಟುಂಬ ಸಮ್ಮಿಲನದ ಮಹತ್ವ ವನ್ನ ತಿಳಿಸಿದರು. ಕಾರ್ಯಕ್ರದ ವೇದಿಕೆಗೆ ಲ |ಕರುಣಾಕರ ಎಣ್ಣೆಮಜಲು ಅತಿಥಿ ಗಳನ್ನು ಆಹ್ವಾನಿಸಿದರು .ಲ |ನಾಗೇಶ್ ಕಿನ್ನಿಕುಮೇರಿ ಸ್ವಾಗತಿಸಿದರು.ಕಾರ್ಯದರ್ಶಿ ಲ |ವಾಸುದೇವ ಮೇಲ್ಪಾಡಿ ವಂದಿಸಿದರು .ವೇದಿಕೆಯಲ್ಲಿ ವಲಯಾಧ್ಯಕ್ಷರಾದ ಲ |ಸಂತೋಷ್ ಜಾಕೆ ,ನಿಕಟ ಪೂರ್ವಾಧ್ಯಕ್ಷ ಲ |ಪುರುಷೋತ್ತಮ ದಂಬೆಕೋಡಿ ,ಕೋಶಾಧಿಕಾರಿ ಲ |ಆನಂದ ಗೌಡ , ಉಪಸ್ಥಿತರಿದ್ದರು .ಕಾರ್ಯ ಕ್ರದಲ್ಲಿ ಕ್ಲಬ್ ನ ಎಲ್ಲಾ ಪೂರ್ವಾಧ್ಯಕ್ಷರು ,ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು .